ಪುತ್ತೂರಿನ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರನಿಗೆ ನಿಂದನೆ ಆರೋಪಿ ಪುತ್ತೂರು ನಗರ ಠಾಣೆಗೆ ಹಾಜರು-ನೌಕರರಲ್ಲಿ ಕ್ಷಮೆಯಾಚನೆ.

ಪುತ್ತೂರು:ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಡಿಗ್ರೂಪ್ ನೌಕರನಿಗೆ ನಿಂದಿಸಿದ ಪ್ರಕರಣದ ಆರೋಪಿ ಪೊಲೀಸ್ ಠಾಣೆಗೆ ಹಾಜರಾಗಿ, ಡಿ ಗ್ರೂಪ್ ನೌಕರರಲ್ಲಿ ಕ್ಷಮೆ ಕೇಳಿದ ಘಟನೆ ನಡೆದಿದೆ.

ಬಂಟ್ವಾಳ ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ಖಲಂದರ್ ಶಾಫಿ(34ವ) ಎಂಬವರು ಡಿ ಗ್ರೂಪ್ ನೌಕರ ಪುರಂದರ ಅವರಿಗೆ ನಿಂದಿಸಿದ್ದಾಗಿ ಆರೋಪಿಸಲಾಗಿದೆ. ಆಸ್ಪತ್ರೆಗೆ ಸ್ಕ್ಯಾನಿಂಗ್‌ಗೆಂದು ಬಂದಿದ್ದ ವ್ಯಕ್ತಿ ಕಡೆಯವರು ಡಿ ಗ್ರೂಪ್ ನೌಕರ ಪುರಂದರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಆರೋಪಿಸಿ ಆಸ್ಪತ್ರೆಯ ಡಿ ಗ್ರೂಪ್ ನೌಕರರು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಆಧರಿಸಿ ಆರೋಪಿಯನ್ನು ಪತ್ತೆ ಮಾಡಿ, ವಿಚಾರಣೆಗೆ ಪುತ್ತೂರು ನಗರ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆರೋಪಿ ಖಲಂದರ್ ಶಾಫಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಲ್ಲದೆ ಸರಕಾರಿ ಅಸ್ಪತ್ರೆಯ ಡಿಗ್ರೂಪ್ ನೌಕರರಲ್ಲಿ ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ.

News Editor

Learn More →

Leave a Reply

Your email address will not be published. Required fields are marked *