ಮಂಗಳೂರು : ಕುಂಟಿಕಾನ ಬಳಿ ಮೀನು ವ್ಯಾಪಾರಿ ಕೊಲೆಯತ್ನ ಪ್ರಕರಣ : ಕೋಡಿಕೆರೆ ಲೋಕೇಶ್ ಪೊಲೀಸ್ ವಶಕ್ಕೆ…!

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಜಿಲ್ಲೆಯಲ್ಲಿ ೩ ಚಾಕು ಇರಿತ ಪ್ರಕರಣ ನಡೆದಿದ್ದು ಈ ಹಿನ್ನೆಲೆ ಕುಂಟಿಕಾನ ಬಳಿ ಉಳ್ಳಾಲ ನಿವಾಸಿ ಲುಕ್ಮಾನ್ ಎಂಬ ಮೀನಿನ ವ್ಯಾಪಾರಿಯನ್ನು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರೌಡಿಶೀಟರ್​ ಕೋಡಿಕೆರೆ ಲೋಕೇಶ್ ಯಾನೆ ಲೋಕಿ ಎಂಬಾತನನ್ನು ಕಾವೂರು ಪೊಲೀಸರು ಎರಡು ದಿನಗಳ ಮೊದಲೇ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂಬಾ ಮಾಹಿತಿ ದೊರೆತಿದೆ.

ಸುಭಾಷ್ ಶೆಟ್ಟಿ ಹತ್ಯೆಗೆ ಪ್ರತೀಕಾರ ತೀರಿಸಲು ಹಲವೆಡೆ ತಂಡವು ಸ್ಕೆಚ್ ಹಾಕಿತ್ತು. ಮುಂಜಾನೆ ಕುಂಟಿಕಾನ ಬಳಿ ಮೀನು ವ್ಯಾಪಾರಿಯ ಕೊಲೆಗೆ ಇನ್ನೋವಾ ಕಾರ್ ನಲ್ಲಿ ಬಂದು ಯತ್ನಿಸಿತ್ತು ಆದರೆ ಆಕ್ಟಿವಾದಲ್ಲಿ ಮಹಿಳೆ ಒಬ್ಬರು ಬೊಬ್ಬೆ ಹೊಡೆದ ಸಂಧರ್ಭದಲ್ಲಿ ಸ್ಥಳದಿಂದ ಕೊಲೆಗಡುಕರು ಓಡಿಹೋಗಿದ್ದಾರೆಂದು ತಿಳಿದುಬಂದಿದೆ.ಮೀನು ವ್ಯಾಪಾರಿ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ತಿಳಿದಿದೆ. ಈ ಹಿನ್ನೆಲೆ ಕಾವೂರು ಪೊಲೀಸರು ಲೋಕೇಶ್ ನನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆಂದು ಮಾಹಿತಿ ದೊರೆತಿದೆ.

News Editor

Learn More →

Leave a Reply

Your email address will not be published. Required fields are marked *