ಬುರ್ಖಾಧಾರಿ ಮಹಿಳೆಯಿಂದ ರಿವರ್ಸ್ ಲವ್ ಜಿಹಾದ್ ಗೆ ಒಳಗಾದವರು ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್,ಮುಸ್ಲಿಮರ ಮೇಲೆ ಒಲವು ಜಾಸ್ತಿ : ಶಾಸಕ ಹರೀಶ್ ಪೂಂಜಾ..!

ಮಂಗಳೂರು : ಮಂಗಳೂರಿನಲ್ಲಿ ಶಾಸಕ ಹರೀಶ್ ಪೂಂಜಾರವರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶಾಸಕ ಹರೀಶ್ ಪೂಂಜಾ ರವರನ್ನು ಸಿರಿಯಲ್ ಆಫೆಂಡೆರ್ ಅಂತ ದಿನೇಶ್ ಗುಂಡೂರಾವ್ ಹೇಳಿದ್ದಕ್ಕೆ ಬುರ್ಖಾಧಾರಿ ಮಹಿಳೆಯಿಂದ ರಿವರ್ಸ್ ಲವ್ ಜಿಹಾದ್ ಗೆ ಒಳಗಾದವರು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಎಂದು ಟಾಂಗ್ ಕೊಟ್ಟಿದ್ದಾರೆ.

ಹಿಂದೂಗಳ ಬದಲು ಗುಂಡೂರಾವ್ ಅವರಿಗೆ ಮುಸ್ಲಿಮರ ಮೇಲೆ ಒಲವು ಜಾಸ್ತಿ ಅವರು ರಿವರ್ಸ್ ಲವ್ ಜಿಹಾದ್ ಆಗಿರುವವರು ದಿನೇಶ್ ಗುಂಡೂರಾವ್ ಅದು ನಮ್ಮ ದುರ್ದೈವ. ನಾನು ಯಾಕೆ ಗುಂಡೂರಾವ್ ಬುರ್ಖಾ ಹಾಕಿದ ಸಚಿವ ಅಂತ ಹೇಳಿದೆ ಅಂದ್ರೆ ಅವರು ಮದುವೆ ಆಗಿದ್ದು ಮುಸ್ಲಿಂ ಸಮುದಾಯ ಮಹಿಳೆಯನ್ನು ಲವ್ ಜಿಹಾದ್ ಅಂದ್ರೆ ಹಿಂದು ಹುಡುಗಿಯವರನ್ನು ಮುಸ್ಲಿಂ ಯುವಕರು ಮದುವೆ ಆಗೋದು ಆದರೆ ಗುಂಡೂರಾವ್ ಅವರಲ್ಲಿ ಉಲ್ಟಾ ಆಗಿದೆ ದಿನೇಶ್ ಗುಂಡೂರಾವ್ ಅವರನ್ನು ಅವರ‌ ಹೆಂಡತಿ ಲವ್ ಜಿಹಾದ್‌ಗೆ ಒಳಪಡಿಸಿದ್ದಾರೆ ಹೀಗಾಗಿ ಹಿಂದುಗಳನ್ನು ತರ್ಡ್ ಸಿಟಿಜನ ರೀತಿಯಲ್ಲಿ ನೋಡುತ್ತಾರೆ ಎಂದು ಮಂಗಳೂರಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಕ್ರೋಶ ಹೊರಹಾಕಿದ್ದಾರೆ.

ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ತಿಳಿದು ಮಾತನಾಡಲಿ,ನನ್ನ ಬಗ್ಗೆ ಸೀರಿಯಲ್ ಆಫೆಂಡೆರ್ ಅಂತ ಅವರು ಹೇಳುತ್ತಾರೆ,ಕಾಂಗ್ರೆಸ್ ಸರಕಾರ ಬಂದ ಬಳಿಕ ನನ್ನ ಮೇಲೆ ೯ ಕೇಸುಗಳು ಹಾಕಿದ್ದಾರೆ. ಹಿಂದೂ ಸಮಾಜಕ್ಕಾಗಿ ಎಷ್ಟು ಕೇಸು ದಾಖಲಿಸಿದರೂ ತೊಂದರೆ ಇಲ್ಲ,ನನ್ನ ಕ್ಷೇತ್ರದ ಜನ ೨ ಲಕ್ಷ ಮತ ಕೊಟ್ಟು ಆಯ್ಕೆ ಮಾಡಿದ್ದಾರೆ .ನನ್ನ ಮಾತನ್ನು ಹಿಂದೂ ಸಮಾಜ ಒಪ್ಪಿಕೊಂಡಿದೆ ಬೇರೆ ಯಾರು ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

News Editor

Learn More →

Leave a Reply

Your email address will not be published. Required fields are marked *