
ಪುತ್ತೂರು, ಏಪ್ರಿಲ್ 17: ಪುತ್ತೂರಿನ ಮಾಯ್ ದೆ ದೇವುಸ್ ಚರ್ಚಿನಲ್ಲಿ ಮೌಂಡಿ (ಪವಿತ್ರ)ಗುರುವಾರದ ಪವಿತ್ರ ಆಚರಣೆ ಭಕ್ತಿಭಾವದಿಂದ ನಡೆಯಿತು. ಈ ವಿಶೇಷ ಧರ್ಮಾಚರಣೆಯಲ್ಲಿ ಮುಖ್ಯ ಗುರುಗಳಾಗಿ ವಂದನೀಯ. ರೂಪೇಶ್ ತಾವ್ರೋ ಬಲಿಪೂಜೆ ನೆರವೇರಿಸಿದರು.

ಪೂಜೆಯಲ್ಲಿ ಶ್ರದ್ಧಾವಂತರ ಭಾಗಿವಹಿಸುವಿಕೆ ಗಮನಸೆಳೆಯಿತು. ಧರ್ಮೋಪದೇಶವನ್ನು ವಂದನೀಯ ರಾಯನ್ ಕ್ರಾಸ್ತಾ ನೀಡಿದರು, ಅವರು ಈ ದಿನದ ಮಹತ್ವವನ್ನು ವಿವರಿಸುತ್ತಾ ಏಸುಕ್ರಿಸ್ತರು ತನ್ನ ಶಿಷ್ಯರ ಪಾದಗಳನ್ನು ಶುದ್ಧೀಕರಿಸುವ ಮುಖಾಂತರ ಎಲ್ಲಾ ಪ್ರಜೆಗಳಿಗೆ ಇತರರ ಪಾದಗಳನ್ನು ತೊಳೆಯಲು ಕರೆಕೊಟ್ಟರು. ಪಾದಗಳನ್ನು ತೊಳೆಯುವುದು ಅಂದರೆ ಇತರರ ಸೇವೆ ಮಾಡುವುದು ಇತರರ ಅಗತ್ಯಗಳಿಗೆ ನಾವು ಸ್ಪಂದಿಸುವುದು ಹಾಗೆಯೇ ದಯೆಯನ್ನು ತೋರಿಸುವುದು.

ಏಸುಕ್ರಿಸ್ತರು ತನಸ್ರೊಂದಿಗೆ ಕೊನೆಯ ಭೋಜನವನ್ನು ಮಾಡಿದರು ಈ ಗೋವಾ ಭೋಜನದಲ್ಲಿ ರೊಟ್ಟಿಯನ್ನು ಹಂಚಿದರು ಹಾಗೆಯೇ ದ್ರಾಕ್ಷಾ ರಸವನ್ನು ಹಂಚಿದರು ಈ ಮೂಲಕ ಯೇಸುಕ್ರಿಸ್ತರು ತಮ್ಮ ಜೀವನವನ್ನು ಪರರೊಂದಿಗೆ ಹಂಚಿಕೊಳ್ಳಲು ಕರೆಕೊಟ್ಟರು ನಾವು ಎಲ್ಲರ ಪ್ರೀತಿಯನ್ನು ಮಾಡಿ ಬದುಕಬೇಕು ಎಂದು ಒತ್ತಿಹೇಳಿದರು.

ಶಿಷ್ಯರ ಪಾದ ತೊಳೆಯುವ ಆಚರಣೆಯನ್ನು ಅತೀ ವಂದನೀಯ ಲಾರೆನ್ಸ್ ಮಸ್ಕರೆನಸ್ ರವರು ನೆರವೇರಿಸಿದರು. ಅವರೊಂದಿಗೆ ವಂದನೀಯ ಲೋಹಿತ್ ಮಸ್ಕರೆನಸ್ ಮತ್ತು ವಂದನೀಯ ಮ್ಯಾಕ್ಸಿಂ ಡಿಸೋಜಾ ರವರು ಬಲಿಪೂಜೆಯಲ್ಲಿ ಭಾಗವಹಿಸಿದರು.

ಮಾಂಡಿ ಗುರುವಾರವು ಪವಿತ್ರ ವಾರದ ಪ್ರಮುಖ ಭಾಗವಾಗಿದ್ದು, ಈ ದಿನ ಯೇಸು ತನ್ನ ಶಿಷ್ಯರೊಂದಿಗೆ ಅಂತಿಮ ಭೋಜನವನ್ನು ಮಾಡಿದದಾದ ದಿನ. ಈ ದಿನವೇ ಕ್ರಿಸ್ತನು ತನ್ನ ಶಿಷ್ಯರಿಗೆ ಸತ್ಯ ಸೇವೆಯ ಪಾಠವನ್ನು ಕಲಿಸಿದರು.
ಚರ್ಚಿನಲ್ಲಿ ನಡೆದ ಈ ಆಚರಣೆ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನುಂಟುಮಾಡಿತು


