ಪುತ್ತೂರು ತಾಲ್ಲೂಕು ಬೆದ್ರಾಳ ಎಂಬಲ್ಲಿ ನೇಣು ಬಿಗಿದು ಅತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತ್ಯು-ಪ್ರಕರಣ ದಾಖಲು.

ಪುತ್ತೂರು: ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆದ್ರಾಳದ ವಿದ್ಯಾರ್ಥಿನಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಫೆ.12ರಂದು ಮೃತಪಟ್ಟಿದ್ದಾರೆ.

ಬೆದ್ರಾಳ ನಿವಾಸಿ ರವೀಂದ್ರ ಎಂಬವರ ಪುತ್ರಿ ಪುತ್ತೂರು ಖಾಸಗಿ ಪ್ಯಾರಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ. ಮೃತ ವಿದ್ಯಾರ್ಥಿನಿ ಪ್ರತೀಕ್ಷಾ ಅವರು ಮೂರು ದಿನಗಳ ಹಿಂದೆ ಬೆದ್ರಾಳ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಆಕೆಯನ್ನು ಪುತ್ತೂರು ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಫೆ. 12ರಂದು ಮೃತಪಟ್ಟಿದ್ದಾರೆ.

ಮೃತರು ತಂದೆ, ತಾಯಿ, ಸಹೋದರಿಯನ್ನು ಆಗಲಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

News Editor

Learn More →

Leave a Reply

Your email address will not be published. Required fields are marked *