ಉಡುಪಿ: ಪತ್ರಕರ್ತ ರೂಪೇಶ್ ವಿ ಕಲ್ಮಾಡಿಗೆ ಶ್ರೀ ಅಪ್ಪಣ್ಣ ಹೆಗ್ಡೆ ಪ್ರಶಸ್ತಿ.

ಪತ್ರಕರ್ತ ರೂಪೇಶ್ ವಿ ಕಲ್ಮಾಡಿ ಇವರು ಶ್ರೀ ಅಪ್ಪಣ್ಣ ಹೆಗ್ಡೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ-2025 ಗೆ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಪತ್ರಕರ್ತರ ಸಂಘ ರಿ ಕುಂದಾಪುರ ಇವರು ಸತತ ಐದನೇ ವರ್ಷದ ಜೀವಮಾನದ ಸಾಧನೆಗಾಗಿ ಉತ್ತಮ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರಿಗೆ ಬಸ್ರೂರಿನ ಶ್ರೀ ಅಪ್ಪಣ್ಣ ಹೆಗ್ಡೆ ಜೀ ಯವರ ಹೆಸರಿನಲ್ಲಿ ಅವರ ನೆನಪಿನ ಭಾವನೆಗಳಿಗೆ ಕೊಡ ಮಾಡುವ ಶ್ರೀ ಅಪ್ಪಣ್ಣ ಹೆಗ್ಡೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ -2025 ನ್ನು ಈ ಬಾರಿ ಉಡುಪಿ ಕಲ್ಮಾಡಿ ಯ ಹೆಸರಾಂತ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರು ಮತ್ತು ಪ್ರೈಮ್ ನ್ಯೂಸ್ ನಿರ್ದೇಶಕರು ರೂಪೇಶ್ ವಿ ಕಲ್ಮಾಡಿ ಇವರು ಆಯ್ಕೆ ಆಗಿರುತ್ತಾರೆ.

ಇದೇ ಜನವರಿ 26 ರ ಸಂಜೆ 5 ಕ್ಕೆ ಕುಂದಾಪುರ ತಾಲೂಕಿನ ಬೀಜಾಡಿಯ SCSM COMPOUND ಸುಂದರ ದಿವ್ಯ ವೇದಿಕೆಯಲ್ಲಿ ಉಡುಪಿ ಶೀರೂರು ಮಠದ ಶ್ರೀ ಶ್ರೀ ಶ್ರೀ ವೇಧವರ್ಧನ ಶ್ರೀ ಪಾದಂಗಳವರು ಮತ್ತು ವಿಶೇಷ ಅತಿಥಿ ಅಭ್ಯಗತರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ ಅಧ್ಯಕ್ಷರು ಕುಂದಾಪುರ ತಾಲೂಕು ಪತ್ರಕರ್ತರ ಸಂಘ ರಿ. ಕುಂದಾಪುರ ಇವರು ತಿಳಿಸಿದ್ದಾರೆ. ಪ್ರಶಸ್ತಿ ರೂಪಾಯಿ 10,000 ಮತ್ತು ನೆನಪಿನ ಪ್ರಶಸ್ತಿ ಒಳಗೊಂಡಿರುತ್ತದೆ.

News Editor

Learn More →

Leave a Reply

Your email address will not be published. Required fields are marked *