ಉಳ್ಳಾಲದ ಬಳಿ ರೈಲ್ವೆ ಹಳಿ ಮೇಲೆ ಜಲ್ಲಿ ಕಲ್ಲು ಸುರಿದು ಹಳಿ ತಪ್ಪಿಸಲು ಯತ್ನ,ತಪ್ಪಿದ ಬಾರಿ ಅನಾಹುತ.

ಮಂಗಳೂರು : ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ರೈಲು ಹಳಿ ತಪ್ಪಿಸುವ ಯತ್ನಗಳು ಹೆಚ್ಚಾಗುತ್ತಿದ್ದು . ಅದೃಷ್ಟವಶಾತ್ ಲೊಕೊಪೈಲಟ್​ಗಳ ಸಮಯ ಪ್ರಜ್ಞೆಯಿಂದ ಹಲವು ಅನಾಹುತಗಳು ತಪ್ಪಿವೆ. ಇದೀಗ ಮಂಗಳೂರಿನಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿದೆ, ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲದ ಬಳಿ ರೈಲ್ವೆ ಹಳಿ ಮೇಲೆ ಆಗಂತುಕರು ಜಲ್ಲಿ ಕಲ್ಲುಗಳನ್ನು ಸುರಿದಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ತಡರಾತ್ರಿ ಸುಮಾರಿಗೆ ತೊಕ್ಕೊಟ್ಟುವಿನ ರೈಲ್ವೇ ಹಳಿಯಲ್ಲಿ ಘಟನೆ ನಡೆದಿದೆ. ರೈಲೊಂದು ಕೇರಳ ಕಡೆಗೆ ತೆರಳಿದ ವೇಳೆ ದೊಡ್ಡ ಶಬ್ದ ಕೇಳಿಸಿತ್ತು, ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಕೇಳಿತ್ತು. ಕೆಲವು ಮಂದಿ ಭೂಕಂಪವಾಗಿರಬಹುದು ಎಂದುಕೊಂಡಿದ್ದರು.ಸ್ಥಳೀಯರು ಬಂದು ಪರಿಶೀಲನೆ ನಡೆಸಿದ್ದಾರೆ, ಆಗ ಹಳಿ ಮೇಲೆ ಜಲ್ಲಿಕಲ್ಲುಗಳನ್ನು ಸುರಿದಿರುವುದು ಕಂಡುಬಂದಿದೆ. ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರ ಮಾಹಿತಿ ನೀಡಲಾಗಿದೆ

News Editor

Learn More →

Leave a Reply

Your email address will not be published. Required fields are marked *