
ಮುಮ್ತಾಜ್ ಅಲಿ ಸಾವಿಗೆ ಕಾರಣರಾದ ಆರೋಪಿಗಳು ಸಿರಾಜ್ ಕೃಷ್ಣಾಪುರ, ಸತ್ತಾರ್ ಕೃಷ್ಣಾಪುರ, ಶಾಫಿ ನಂದಾವರ, ಮುಸ್ತಫಾ ಫಾಲ್ಕನ್. ಬ್ಲಾಕ್ ಮೇಲ್ ಮಾಡಿದ ಹುಡುಗಿ ರೆಹಮತ್


ಮಂಗಳೂರು : ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಎಂಎಲ್‌ಸಿ ಬಿ.ಎಂ.ಫಾರೂಕ್ ಹಾಗೂ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೋದರ, ಉದ್ಯಮಿ ಮುಮ್ತಾಝ್ ಆಲಿ ಶವ ಸೋಮವಾರ ಬೆಳಿಗ್ಗೆ ಪಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ. ಆವರ ಸಾವಿನ ಹಿಂದೆ ಮಹಿಳೆಯೊಬ್ಬಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಆಲಿ ಸಹೋದರ ಹೈದರ್ ಆಲಿ ಕಾವೂರು ಠಾಣೆಗೆ ದೂರು ನೀಡಿದ್ದು, 6 ಜನರ ವಿರುದ್ದ ಕೇಸ್ ದಾಖಲಾಗಿದೆ. ಕಾಟಿಪಳ್ಳ ನಿವಾಸಿ ರೆಹಮತ್, ಸುರತ್ಕಲ್ ಆಸುಪಾಸಿನ ನಿವಾಸಿಗಳಾದ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯಿಬ್, ಸತ್ತಾರ್ ಮತ್ತು ಮುಮ್ತಾಜ್ ಆಲಿಯವರ ಕಾರು ಚಾಲಕ ಸಿರಾಜ್ ಪ್ರಕರಣದ ಆರೋಪಿಗಳು.
ಮುಮ್ತಾಝ್ ಅವರ ಕಛೇರಿಯಲ್ಲಿ ಈ ಹಿಂದೆ ಉದ್ಯೋಗಿಯಾಗಿದ್ದ ರೆಹಮತ್ ಪ್ರಕರಣದ ಕಿಂಗ್ ಪಿನ್ ಆಗಿದ್ದು, ನಿರಂತರವಾಗಿ ಆಲಿಯವರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದಳು. ಸೆಕ್ಸ್ ವಿಡಿಯೋ ಬಹಿರಂಗ ಪಡಿಸುವುದಾಗಿ ಬೆದರಿಸುತ್ತಿದ್ದಳು. ಇದರಿಂದಾಗಿ ಸಾಮಾಜಿಕವಾಗಿ ಮಾನ ಹೋಗುವ ಅಂಜಿಕೆಯಿಂದ ಮುಮ್ತಾಝ್ ಆಲಿ ಅವರು ನದಿಗೆ ಹಾರಿ ಪ್ರಾಣ ಕಳೆದುಕೊಂಢಿರಬಹುದು ಎಂದು ಶಂಕಿಸಲಾಗುತ್ತಿದೆ.
ಸುರತ್ಕಲ್ ಕೃಷ್ಣಾಪುರದ 7ನೇ ಬ್ಲಾಕ್ ನಿವಾಸಿ ಆಯಿಷಾ ರೆಹಮತ್ ಗೆ ಆಲಿಯವರು ಹಲವು ವರ್ಷಗಳ ಪರಿಚಯ. ಈಕೆ ಅವರದೇ ಕಛೇರಿಯಲ್ಲಿ ಉದ್ಯೋಗಿಯಾಗಿದ್ದಳು.. ಈ ವೇಳೆ ಆಕೆ ಆಲಿಯವರನ್ನು ಹನಿ ಟ್ರ್ಯಾಪ್ ಮಾಡಿದ್ದಾಳೆ ಎನ್ನಲಾಗುತ್ತಿದೆ. ಆಕೆ ರಹಸ್ಯವಾಗಿ ಕಳೆದ ಆತ್ಮೀಯ ಕ್ಷಣದ ವಿಡಿಯೋವನ್ನು ಗುಪ್ತವಾಗಿ ಚಿತ್ರಿಕರಿಸಿ ಇಟ್ಟುಕೊಂಡಿದ್ದಳು. 2-3 ತಿಂಗಳಿನಿಂದ ಇತ್ತೀಚೆಗೆ ಸೆಕ್ಸ್ ವಿಡಿಯೊ ಇದೆ ಎಂದು ಹೇಳಿ ಆಕೆ ಮುಮ್ತಾಜ್ ನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ. ವಿವಾಹವಾಗುವಂತೆ ಬೆದರಿಕೆಯೊಡ್ಡುತ್ತಿದ್ದಳು. ವಿವಾಹಕ್ಕೆ ಮುಮ್ತಾಝ್ ನಿರಾಕರಿಸಿದ್ದರು ಎನ್ನಲಾಗಿದೆ. ಅದರ ಬಳಿಕ ಹಣ ನೀಡುವಂತೆ ಪೀಡಿಸಲು ಆರಂಭಿಸಿದ್ದಾಳೆ
ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ರಚನೆ
ವಿದ್ಯಾಸಂಸ್ಥೆ ಮಾತ್ರವಲ್ಲದೆ ವಿವಿಧ ಉದ್ಯಮಗಳನ್ನು ಹೊಂದಿದ್ದ ಮುಮ್ತಾಜ್ ಅಲಿ ಸಾಮಾಜಿಕ, ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದರು. ಪ್ರಥಮ ಆರೋಪಿ ಆಯಿಷಾ ರೆಹಮತ್, ಇತರರ ಜತೆ ಸೇರಿ ವ್ಯವಸ್ಥಿತವಾಗಿ ಹನಿಟ್ರಾಪ್ ನಡೆಸಿದ್ದೇ ಮುಮ್ತಾಜ್ ಸಾವಿಗೆ ಕಾರಣ. ಆರೋಪಿಗಳ ಪತ್ತೆಗೆ ಪೊಲೀಸ್ ತಂಡಗಳು ಕಾರ್ಯಾಚರಣೆ ಆರಂಭಿಸಿವೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಭಾನುವಾರ ಬೆಳಗ್ಗೆ ಸುಮಾರು 3 ಗಂಟೆ ವೇಳೆಗೆ ಮುಮ್ತಾಜ್ ಅವರು ಕೃತ್ಯಕ್ಕೆ ಕಾರಣರಾದ ವ್ಯಕ್ತಿಗಳನ್ನು ಹೆಸರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಆಡಿಯೊ ಸಂದೇಶ ಕಳುಹಿಸಿದ್ದರು. ಈ ಕುರಿತಾಗಿಯೂ ತನಿಖೆ ಮುಂದುವರಿದಿದೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ


