ಪುಂಜಾಲಕಟ್ಟೆ : ಜಾನುವಾರುಗಳ ಅಕ್ರಮ ಸಾಗಾಟ ಹಾಗೂ ಕಡಿದು ಮಾರಾಟ : ಪೊಲೀಸ್‌ ದಾಳಿಯ ವೇಳೆ ಪರಾರಿಯಾದ ಅಶ್ರಪ್‌ ಹಾಗೂ ಸಿರಾಜ್‌.

ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ  ಮಾಡುತ್ತಿರುವ ಆರೋಪದಡಿ ಅಶ್ರಪ್‌ ಎಂಬಾತನ ವಿರುದ್ದ ಹಾಗೂ ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿರುವ ಬಗ್ಗೆ ಕರಾಯ ಸಿರಾಜ್‌ ವಿರುದ್ದ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿಯ ಮೇರೆಗೆ   ಜೂ 1 ರಂದು ಆರೋಪಿಗಳಿರುವ ಸ್ಥಳಕ್ಕೆ ಪುಂಜಾಲಕಟ್ಟೆ ಠಾಣೆ ಪಿಎಸ್ಐ ಉದಯರವಿ ವೈ ಎಂ   ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ\

ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಪಲ್ಕೆ ಎಂಬಲ್ಲಿ, ಆರೋಪಿ ಅಶ್ರಪ್‌ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ  ಮಾಹಿತಿ ಮೇರೆಗೆ ಪೊಲೀಸರು ಆತನ ಮನೆ   ಬಳಿ ತೆರಳಿದ್ದಾರೆ. ಆಗ , KA 05 Z 1833ನೇ ವಾಹನದಿಂದ ಜಾನುವಾರುಗಳನ್ನು ಇಳಿಸುತ್ತಿದ್ದ. ಪೊಲೀಸರನ್ನು ನೋಡುತ್ತಲೇ ಓಡಿ ತಪ್ಪಿಸಿಕೊಂಡಿರುತ್ತಾನೆ. ಸ್ಥಳದಲ್ಲಿದ್ದ ಎರಡು ಜಾನುವಾರುಗಳನ್ನು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ವಾಹವನ್ನು ಮತ್ತು ವಾಹನದಲ್ಲಿದ್ದ ಮೊಬೈಲ್‍ನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ

ಅಲ್ಲಿಂದ ಅನತಿ ದುರದಲ್ಲಿದ್ದ  ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿದ್ದ ಮತ್ತೊರ್ವ ಆರೋಪಿ  ಸಿರಾಜ್   ಮನೆ ಬಳಿ ತೆರಳಿದಾಗ ಸ್ಥಳದಲ್ಲಿದ್ದ ಕರಾಯದ ಸಿರಾಜ್‍ ಹಾಗೂ ಇನ್ನೊಬ್ಬ ಆರೋಪಿ ಸ್ಥಳದಿಂದ ಓಡಿ  ತಪ್ಪಿಸಿಕೊಂಡಿದ್ದಾರೆ. ಆತನ ಮನೆಯ ಹಿಂಭಾಗದ ಶೆಡ್ ನಲ್ಲಿ, ಜಾನುವಾರಿನ ಮಾಂಸ  ಹಾಗೂ ಮಾಂಸ ಮಾಡಲು ಉಪಯೋಗಿಸಿ ಕತ್ತಿ ಹಾಗೂ ಇತರೆ ಸೊತ್ತುಗಳು ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ 

 ಆರೋಪಿಗಳ ವಿರುದ್ದ  ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020ರ ಕಲಂ ಕಲಂ: 4,5,7,12 ಹಾಗೂ  ಪ್ರಾಣಿ ಹಿಂಸೆ ತಡೆ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ ಕಾಯ್ದೆ 1960ರ ಕಲಂ: 11(1)(ಡಿ) ಮತ್ತು  ಕಲಂ: 66 ಜೊತೆಗೆ 192(ಎ) ಐಎಂವಿ ಆಕ್ಟ್‌, ಕಲಂ: 53(1) ಜೊತೆಗೆ 192 ಐಎಂವಿ ಆಕ್ಟ್‌ ಹಾಗೂ ಕಲಂ: 379 ಐಪಿಸಿರಂತೆ    ದಾಖಲಿಸಿಕೊಂಡು ಪೊಲೀಸರು  ತನಿಖೆ ನಡೆಸುತ್ತಿದ್ದಾರೆ

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?