


ಹೊಸದಿಲ್ಲಿ: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಜೂನ್ 13 ರಂದು ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ವಿಧಾನಸಭೆಯಲ್ಲಿ ಬಿಜೆಪಿಗಿರುವ ಸಂಖ್ಯಾ ಬಲದ ಆಧಾರದಲ್ಲಿ ಪಕ್ಷವು ಕೇವಲ 3 ಸ್ಥಾನಗಳನ್ನಷ್ಟೆ ಗೆಲ್ಲುವ ಸಾಧ್ಯತೆ ಇದೆ
ಮಾಜಿ ಸಚಿವ ಸಿ.ಟಿ.ರವಿ, ಪರಿಷತ್ತಿನಲ್ಲಿ ವಿರೋಧ ಮುಖ್ಯಸಚೇತಕರಾಗಿರುವ ಎನ್.ರವಿಕುಮಾರ್ ಹಾಗೂ ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಜಿ.ಮುಳೆ ಯನ್ನು ಅಭ್ಯರ್ಥಿಗಳನ್ನಾಗಿ ಬಿಜೆಪಿ ಘೊಷಿಸಿದೆ
ಒಟ್ಟು 11 ಸ್ಥಾನಗಳಿಗೆ ಜೂ 13 ರಂದು ಚುನಾವಣೆ ನಡೆಯಲಿದೆ . ಪ್ರತಿ ಅಭ್ಯರ್ಥಿಯ ಗೆಲುವಿಗೆ ಕನಿಷ್ಟ 19 ಮತಗಳ ಅಗತ್ಯವಿದೆ. ಬಿಜೆಪಿ ಬಳಿ 66 ಮತಗಳಿವೆ.

ಈ ಬಾರಿ ಲೋಕಸಭಾ ಟಿಕೆಟ್ ವಂಚಿತರಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಹಾಗೂ ಮಂಡ್ಯ ಲೋಕಸಭೆ ಸಂಸದೆ ಸುಮಲತಾರವರಿಗೆ ವಿದಾನ ಪರಿಷತ್ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಪಕ್ಷದ ವಲಯದಲ್ಲಿತ್ತು. ಆದರೇ ಇಬ್ಬರಿಗೆ ಟಿಕೆಟ್ ಕೈ ತಪ್ಪಿದೆ


