ಬಂಟ್ವಾಳ: ಭಾರೀ ಮಳೆಯ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ನಡೆದಿದೆ. ಅಪಾಯದಿಂದ ಪಾರಾದ ಕಾರು ಚಾಲಕ ತೌಶೀಫ್ ಎಂದು ಗುರುತಿಸಲಾಗಿದೆ. ತೌಶೀಫ್ ಅವರು ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದು, ಮಾಣಿ ಕಡೆಯಿಂದ ಮಂಗಳೂರಿಗೆ ತೆರಳುವ ವೇಳೆ...
Read More
ಬೆಳ್ತಂಗಡಿ : ಅಕ್ರಮ ಜಾನುವಾರು ಸಾಗಾಟ ಪತ್ತೆಹಚ್ಚಿದ ಉಪ್ಪಿನಂಗಡಿ ಪೊಲೀಸರು.
ಬೆಳ್ತಂಗಡಿ : ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಅಕ್ರಮ ಜಾನುವಾರು ಸಾಗಾಟವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆಹಚ್ಚಿ, ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿ ನಡೆದಿದೆ. ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಬಂದರು ಗ್ರಾಮದ ಮೈರೋತ್ತಡ್ಕ ನಿವಾಸಿ ರಕ್ಷಿತ್ (25) ಎಂದು...
Read More
ಉಡುಪಿ: ಮನೆಗೆ ನುಗ್ಗಿ ನಗ-ನಗದು ಕಳವು.
ಉಡುಪಿ: ಮನೆಯಲ್ಲಿ ಯಾರೂ ಇಲ್ಲದ ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ಉಡುಪಿ ಬೈಲೂರಿನಿಂದ ನಡೆದಿದೆ. ಬೈಲೂರಿನ ನಳಿನಿ ಪ್ರಭಾವತಿ ಎಂಬವರು ಮೇ 9ರಂದು ಮಡಿಕೇರಿ, ಮೈಸೂರು ಕಡೆ ಪ್ರವಾಸ ಹೋಗಿದ್ದರು. ಮೇ 11ರಂದು ಮೈಸೂರಿನಲ್ಲಿದ್ದಾಗ ಅವರ...
Read More
ಮಂಗಳೂರು: SSLC ಪರೀಕ್ಷೆಯಲ್ಲಿ ಜಸ್ಟ್ ಪಾಸಾದ ವಿದ್ಯಾರ್ಥಿಯ ಸ್ನೇಹಿತರಿಂದ ಸಂಭ್ರಮಾಚರಣೆ: ಬ್ಯಾನರ್ ವೈರಲ್.
ಮಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ ಕೇವಲ 300 ಅಂಕಗಳೊಂದಿಗೆ ಜಸ್ಟ್ ಪಾಸಾದ ಮಂಗಳೂರಿನ ವಿದ್ಯಾರ್ಥಿಯೊಬ್ಬ ನಿಗೆ ಆತನ ಸ್ನೇಹಿತರು ಅಭಿನಂದನಾ ಬ್ಯಾನರನ್ನೇ ಹಾಕಿ ಭರ್ಜರಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ನಗರದ ಪಚ್ಚನಾಡಿಯ ಹ್ಯಾಸ್ಲಿನ್ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪರೀಕ್ಷೆ ಪಾಸಾಗುತ್ತಾನೋ ಇಲ್ಲವೊ ಎಂಬ ಗೊಂದಲದಲ್ಲಿ ಆತನ ಸ್ನೇಹಿತರಿದ್ದರು....
Read More
ಸಂಸದ ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಹಂಚಿಕೆ ಪ್ರಕರಣ: ಬಿಜೆಪಿಯ ಇಬ್ಬರು ಕಾರ್ಯಕರ್ತರ ಬಂಧನ.
ಹಾಸನ: ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋಗಳ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರಾದ, ಆರೋಪಿಗಳಾದ ಪಿ ಲಿಖಿತ್ ಗೌಡ ಮತ್ತು ಚೇತನ್ ನನ್ನು ಬಂಧಿಸಿದೆ. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಭಾನುವಾರ ಆದೇಶ ಹೊರಡಿಸಿದೆ....
Read More
ದ.ಕ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದಿನೇಶ್ ಮೆದು ಮೇಲೆ ಉದ್ದೇಶಪೂರ್ವಕ ಮತ್ತು ರಾಜಕೀಯ ಒತ್ತಡಕ್ಕೆ ಮಣಿದು ದೂರು ದಾಖಲಿಸಲಾಗಿದೆ : ಸಂಘದಿಂದ ಸ್ಪಷ್ಟನೆ
ಕಡಬ ತಾಲೂಕಿನ ಕುದ್ಮಾರು ಗ್ರಾಮದ ನೂಜಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ ನಡೆದ ವಿಚಾರಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದವರು ಸ್ಪಷ್ಟನೆ ನೀಡಿದ್ದು, ‘ನೂಜಿಯಲ್ಲಿ ಸ್ಥಳೀಯ ದೇವಸ್ಥಾನದ ಜೀರ್ಣೋದ್ದಾರಕ್ಕೆ ಬೇಕಾದ ಮರಳು ಸಂಗ್ರಹಿಸಿದ್ದು, ಇದಕ್ಕಾಗಿ ಗಣಿ ಇಲಾಖೆಯ ಮೂಲಕ ಸರಕಾರಕ್ಕೆ ರಾಜಧನ ಕಟ್ಟಿ ಸಂಗ್ರಹಿಸಲಾಗಿತ್ತು’...
Read More
ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಚೆನ್ನಪ್ಪ ಗೌಡರ ವಿರುದ್ಧ ಬರೋಬ್ಬರಿ 6 ಎಫ್ಐಆರ್ ದಾಖಲು – ಬೃಹತ್ ಮರಳು ದಂಧೆಯ ಅಡ್ಡೆಗೆ ಪೊಲೀಸ್ ದಾಳಿ
ಕುಮಾರಧಾರ ನದಿಯಲ್ಲಿ ಮರಳು ಕಳ್ಳತನ ನಡೆಸುತ್ತಿದ್ದ ಬೃಹತ್ ಜಾಲವೊಂದನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮೇ 7 ರಂದು ಬೇಧಿಸಿದ್ದಾರೆ. ಜಿಲ್ಲೆಯ ಪ್ರತಿಷ್ಟಿತ ಜನ ಪ್ರತಿನಿಧಿಯೊಬ್ಬರ ಕೃಪಕಟಾಕ್ಷದಲ್ಲಿ ಬಿಜೆಪಿಯ ಪ್ರಭಾವಿ ನಾಯಕರೊಬ್ಬರ ನೇತೃತ್ವದಲ್ಲಿ ಕಡಬದ ಕುದ್ಮಾರಿನಲ್ಲಿ ಈ ಬೃಹತ್ ಮರಳು ದಂಧೆ (Sand Mafia) ಕಳೆದ ಹಲವಾರು...
Read More
ಉಡುಪಿ: ಜಿಲ್ಲಾ ಕಾರಾಗೃಹದಲ್ಲಿ ಹೃದಯಾಘಾತದಿಂದ ಖೈದಿ ಸಾವು
ಉಡುಪಿ: ಜಿಲ್ಲೆಯ ಹಿರಿಯಡ್ಕದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ. ಸಾವನ್ನಪ್ಪಿದ ಕೈದಿ ಅನುಪ್ ಶೆಟ್ಟಿ (38) ಎಂದು ತಿಳಿದು ಬಂದಿದೆ. ಅನೂಪ್ ಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯ ಸಾವು ಸಂಭವಿಸಿದೆ...
Read More
ಕೀ ಸಮೇತ ಯಾರೋ ನಿಲ್ಲಿಸಿದ್ದ ವಾಹನವನ್ನು ಚಲಾಯಿಸಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆಸಿದ ವ್ಯಕ್ತಿಯ ಅವಾಂತರ ವಾಹನದಲ್ಲಿತ್ತು ಬಂದೂಕು
ಪುತ್ತೂರು: ಮಾನಸಿಕ ಅಸ್ವಸ್ಥನಂತೆ ಗೋಚರಿಸುತ್ತಿದ್ದ ಯುವಕನೊಬ್ಬ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿದ್ದ ವಾಹನವನ್ನು ಎರ್ರಾಬಿರ್ರಿ ಚಲಾಯಿಸಿ ಹಲವು ಢಿಕ್ಕಿ ಹೊಡೆದ ಹಾಗೂ ಆ ವಾಹನದಲ್ಲಿ ಬಂದೂಕು ಕಂಡು ಸಾರ್ವಜನಿಕರು ಭಯಗೊಂಡ ಘಟನೆ ಮೇ ೧೧ ರಂದು ಶನಿವಾರ ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಘಟನಯೂ ಕೆಲವು ಸಮಯದವರೆಗೆ ಸಾರ್ವಜನಿಕ...
Read More
ಆಂಬುಲೆನ್ಸ್ ನಲ್ಲಿ ವಿಪರೀತ ಬಾಡಿಗೆ ಹೇಳಿದ್ದರಿಂದ ಶಿರೂರಿನಲ್ಲಿ ಶವ ಸಾಗಿಸಿದ ಕಾರು ಅಡ್ಡಗಟ್ಟಿ ಆಂಬುಲೆನ್ಸ್ ಚಾಲಕನ ಆವಾಜ್
ಟೂರಿಸ್ಟ್ ಕಾರಿನಲ್ಲಿ ಶವವನ್ನು ಕಟ್ಟಿ ಡಿಕ್ಕಿಯಲ್ಲಿ ಇಟ್ಟು ಒಯ್ಯುತ್ತಿದ್ದಾಗ ಬೈಂದೂರಿನ ಶಿರೂರ್ ಟೋಲ್ ಗೇಟ್ ಬಳಿ ಆಂಬುಲೆನ್ಸ್ ಚಾಲಕನೊಬ್ಬ ಅಡ್ಡಗಟ್ಟಿ ಟೂರಿಸ್ಟ್ ಕಾರು ಚಾಲಕನನ್ನು ದಬಾಯಿಸಿದ ಪ್ರಸಂಗದ ವಿಡಿಯೋ ವೈರಲ್ ಆಗಿದೆ. ಬೆಳಗಾವಿ ಮೂಲದ ಕುಟುಂಬ ಉಡುಪಿಯ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಶವ...
Read More

