
ಪುತ್ತೂರು: ಮಾನಸಿಕ ಅಸ್ವಸ್ಥನಂತೆ ಗೋಚರಿಸುತ್ತಿದ್ದ ಯುವಕನೊಬ್ಬ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿದ್ದ ವಾಹನವನ್ನು ಎರ್ರಾಬಿರ್ರಿ ಚಲಾಯಿಸಿ ಹಲವು ಢಿಕ್ಕಿ ಹೊಡೆದ ಹಾಗೂ ಆ ವಾಹನದಲ್ಲಿ ಬಂದೂಕು ಕಂಡು ಸಾರ್ವಜನಿಕರು ಭಯಗೊಂಡ ಘಟನೆ ಮೇ ೧೧ ರಂದು ಶನಿವಾರ ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನಯೂ ಕೆಲವು ಸಮಯದವರೆಗೆ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೂ ಭೀತಿಗೂ ಕಾರಣವಾಯಿತು. ಕೊನೆಗೆ ಸಾರ್ವಜನಿಕರ ನೆರವಿನಿಂದ ಸಂಪ್ಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಆ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಅಡ್ಡಾದಿಡ್ಡಿ ವಾಹನ ಚಲಾಯಿಸಿದ ವ್ಯಕ್ತಿ ಕೇರಳದ ಕೊಟ್ಟಯಾಂ ನಿವಾಸಿ ಆರುಣ್ ಎಂದು ತಿಳಿದು ಬಂದಿದೆ. ಈತ ಕೊಟ್ಟಾಯಂ ನಿಂದ ತಿಂಗಳ ಹಿಂದೆ ನಾಪತ್ತೆಯಾಗಿದ್ದ. ಈತ ಕಳೆದ ಹಲವಾರು ಸಮಯದಿಂದ ಮಾನಸಿಕ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ
೧೧೨ ಎಡವಟ್ಟು
ಈ ವ್ಯಕ್ತಿ ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ಪುತ್ತೂರಿನ ಹೊರವಲಯ ಕುಂಬ್ರ ಪೇಟೆಯ ಬಳಿ ಕಾಣಿಸಿಕೊಂಡಿದ್ದಾನೆ. ವಿಚಿತ್ರವಾಗಿ ವರ್ತಿಸುತ್ತಿದ್ದ ಇವನ ನಡವಳಿಕೆಯನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್ ಸಹಾಯವಾಣಿ ೧೧೨ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೆಲ ಸಮಯದ ಬಳಿಕ ಆಗಮಿಸಿದ ೧೧೨ ವಾಹನದ ಸಿಬ್ಬಂದಿಗಳು ಅರುಣ್ ನನ್ನು ತಮ್ಮ ವಾಹನದಲ್ಲಿ ಕೂರಿಸಿಕೊಂಡು ಪುತ್ತೂರು ಕಡೆಗೆ ತೆರಳಿದ್ದಾರೆ. ಆದರೇ ಅವರು ಈತನನ್ನು ಆಸ್ಫತ್ರೆಗೆ ದಾಖಲಿಸದೇ ಪುತ್ತೂರು – ಕುಂಬ್ರ ರಸ್ತೆಯ ಕಲ್ಲರ್ಪೆ ಎಂಬಲ್ಲಿ ಇಳಿಸಿ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದಾದ ಬಳಿಕ ಅಲ್ಲಿ ಇಲ್ಲಿ ಸುತ್ತಾಡಿದ ಈತ ಸಂಜೆಯ ಹೊತ್ತಿಗೆ ಸಂಪ್ಯ ತಲುಪಿದ್ದಾನೆ. ಅಲ್ಲಿ ರಸ್ತೆ ಬದಿಯಲ್ಲಿ ಕೀ ಸಮೇತ ಇದ್ದ ಒಮ್ನಿ ಕಾರನ್ನು ನೋಡಿದ ಅರುಣ್ ಅದನ್ನು ಚಲಾಯಿಸಿಕೊಂಡು ಮತ್ತೆ ಕುಂಬ್ರದೆಡೆಗೆ ಹೋಗಿದ್ದಾನೆ. ಈ ವೇಳೆ ವಾಹನವನ್ನು ಎರ್ರಾಬಿರ್ರಿ ಚಲಾಯಿಸಿದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ. ಸಾರ್ವಜನಿಕ ಪ್ರಾಕರ ೭-೮ ವಾಹನಗಳಿಗೆ ಢಿಕ್ಕಿ ಹೊಡೆದಿದ್ದು, ಪೊಲೀಸರ ಪ್ರಕಾರ ೨-೩ ವಾಹನಗಳಿಗೆ ಢಿಕ್ಕಿ ಹೊಡೆಸಿದ್ದಾನೆ.
ಇವನ ಅವಾಂತರ ಗಮನಿಸಿದ ಸಾರ್ವಜನಿಕರು ಆ ಒಮ್ನಿ ವಾಹನವನ್ನು ಅಡ್ಡಗಟ್ಟಿದ್ದಾರೆ. ಆಗ ವಾಹನದಲ್ಲಿ ಬಂದೂಕು ಇರುವುದು ಸಾರ್ವಜನಿಕರಿಗೆ ಕಾಣಿಸಿದೆ. ಇದು ಆತಂಕ ಸೃಷ್ಟಿಸಿದೆ. ಬಳಿಕ ಒಂದಷ್ಟು ಯುವಕರು ದೈರ್ಯ ಪ್ರದರ್ಶಿಸಿ ಅರುಣ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕಾಗಿಮಿಸಿದ ಸಂಪ್ಯ ಪೊಲೀಸ್ ಉಪನಿರೀಕ್ಷಕರು ಮಾನಸಿಕನಂತೆ ಇದ್ದ ವ್ಯಕ್ತಿಯನ್ನು ವಿಚಾರಸಿದಾಗ ಕೇರಳ ಮೂಲದ ಅರುಣ್ ಎಂದು ತಿಳಿದು ಬಂದಿದೆ. ಕೊಟ್ಟಾಯಂ ನಿಂದ ತಿಂಗಳ ಹಿಂದೆ ಈತ ನಾಪತ್ತೆಯಾಗಿದ್ದು, ಆತನ ಪೋಷಕರಿಗೂ ಮಾಹಿತಿ ನೀಡುವ ಕೆಲಸವನ್ನು ಪೊಲೀಸರು ಮಾಡಿದ್ದು, ಆಸ್ಪತ್ರೆಗೆ ದಾಖಲಿಸಿ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.


