ರೇವ್​​​ ಪಾರ್ಟಿ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರ ತಂಡ ದಾಳಿ MDMA, ಕೊಕೆನ್ ಸೇರಿ ಹಲವು ಬಗೆಯ ಮಾದಕ ವಸ್ತುಗಳು ಪತ್ತೆ.

 ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫಾರ್ಮ್​​​ ಹೌಸ್​​ನಲ್ಲಿ ನಡೆಯುತ್ತಿದ್ದ ರೇವ್​​​ ಪಾರ್ಟಿ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿದೆ. ಭಾನುವಾರ ಸಂಜೆಯಿಂದ ನಡೆಯುತ್ತಿದ್ದ ಪಾರ್ಟಿಯ ಕುರಿತು ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ನಸುಕಿನಜಾವ 3 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪಾರ್ಟಿಯಲ್ಲಿ ಮಾದಕ ಪದಾರ್ಥ ಪತ್ತೆಯಾಗಿದ್ದು, ತೆಲುಗು ನಟ ನಟಿಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.ಜೊತೆಗೆ ಘಟನೆ ಸಂಬಂಧ ಪಾರ್ಟಿ ಆಯೋಜಕ ವಾಸು ಹಾಗೂ ಮೂವರು ಡ್ರಗ್ ಪೆಡ್ಲರ್ಸ್ (Drug Peddlers) ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಪೊಲೀಸರ ದಾಳಿ ವೇಳೆ 45 ಗ್ರಾಂ ಡ್ರಗ್ಸ್, MDMA, ಕೊಕೆನ್ ಸೇರಿ ಹಲವು ಬಗೆಯ ಮಾದಕ ವಸ್ತುಗಳು ಪತ್ತೆಯಾಗಿವೆ. ಈ ಪಾರ್ಟಿಯಲ್ಲಿ ಕೆಲವು ತೆಲುಗು ನಟಿಯರು, ಮಾಡೆಲ್‌ಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಇನ್ನು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ 6 ಗಂಟೆಗಳಿಗೂ ಹೆಚ್ಚುಕಾಲದಿಂದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸೋಕೋ ಟೀಮ್ ಡ್ರಗ್ಸ್​​​​ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇವೆಂಟ್ ಮ್ಯಾನೇಜ್​ಮೆಂಟ್​​​​​ ಕಂಪನಿ ಹೊಂದಿರುವ ಹೈದರಾಬಾದ್​​ ಮೂಲದ ವಾಸು ಎಂಬುವವರು G.R.ಫಾರ್ಮ್​​​ಹೌಸ್​​ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು. 78 ಜನರಿಗೆ ಬರ್ತಡೇ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಸದ್ಯ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಕೆಲ ಮಾದಕವಸ್ತುವನ್ನು ಟಾಯ್ಲೆಟ್​ನಲ್ಲಿ‌ ಬಿಸಾಕಿ ನೀರುಹಾಕಿ ನಾಶ ಮಾಡಲು ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ.

ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಅವರು ಭೇಟಿ ನೀಡಿ ಹೆಬ್ಬಗೋಡಿ ಪೊಲೀಸರಿಂದ ಮಾಹಿತಿ ಪಡೆಯುತ್ತಿದ್ದಾರೆ. FSL ಟೀಂ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಅಗತ್ಯ ಸಾಕ್ಷ್ಯ ಸಂಗ್ರಹಿಸಿ ತೆರಳಿದೆ.

ಅವಧಿ ಮೀರಿ ರೇವ್‌ ಪಾರ್ಟಿ ನಡೆಯುತ್ತಿರುವ ಬಗ್ಗೆ ಸೂಚನೆ ಸಿಕ್ಕಿದ್ದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿ ಮಾದಕ ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ರೇವ್‌ ಪಾರ್ಟಿಯಲ್ಲಿ ಜನಪ್ರಿಯ ಡಿಜಿಎಗಳಾದ ರಾಬ್ಸ್‌, ಕಾಯ್ವಿ, ಬ್ಲಡಿ ಮಸ್ಕರಾ ಮುಂತಾದವರೂ ಭಾಗಿಯಾಗಿದ್ದರು ಎನ್ನಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ನಾರ್ಕೊಟಿಕ್ಸ್ ಸ್ನಿಫರ್ ಡಾಗ್ ಗಳಾದ ಭೂಮಿ, ರಾಣಾ , ರಾಮು ಮತ್ತು ಮೈಲು ಎಂಬ ಶ್ವಾನದಳದಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?