
ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಸಬ್ ರಿಜಿಸ್ಟರ್ಗಳ ರಿಜಿಸ್ಟ್ರೇಷನ್ ಸರ್ವರ್ ಗಳು ಸರಿಯಾದ ಸಮಯಕ್ಕೆ ಸಿಗದೆ ನಾಗರಿಕರು, ವಕೀಲರು ಹಾಗೂ ಇತರ ಡಾಕ್ಯುಮೆಂಟ್ ಕೆಲಸ ಮಾಡುವವರು ತೊಂದರೆ ಅನುಭವಿಸುತ್ತಿರುವುದು ಮತ್ತೆ ಮುಂದುವರಿದಿದೆ.
ರಾಜ್ಯದ ಮಹತ್ವಕಾಂಕ್ಷಿ ಈ ಯೋಜನೆ ಹಿಂದಿನಗಿಂತಲೂ ಹೆಚ್ಚು ತೊಂದರೆಯನ್ನು ಉಂಟು ಮಾಡುತ್ತಿದ್ದು, ಇದರಿಂದ ರಾತ್ರಿ ಹಗಲು ಸರ್ವರಿಗಾಗಿ ಕಾಯಬೇಕಾದ ಪರಿಸ್ಥಿತಿ ಬಂದು ಒದಗಿದೆ ಎಂದು ವಕೀಲರೂಬ್ಬರು ಅಭಿಪ್ರಾಯ ಪಡುತ್ತಿದ್ದಾರೆ.
ಬೆಳಿಗ್ಗೆ ಹೊತ್ತುಗಳಲ್ಲಿ ಸರ್ವರ್ ಸಿಗುವುದೇ ಅಪರೂಪವಾಗಿದೆ. ಇದರಿಂದ ತಮ್ಮ ಕಕ್ಷಿಧಾರರಿಗೆ ಸರಿಯಾದ ಸಮಯಕ್ಕೆ ದಿನ ನಿಗದಿಪಡಿಸಲು ಬಹಳಷ್ಟು ತೊಂದರೆ ಅನುಭವಿಸಬೇಕಾಗಿ ಬಂದಿದೆ ಎಂದು ಹೆಚ್ಚಿನ ಡಾಕ್ಯುಮೆಂಟ್ ಕೆಲಸ ಮಾಡುವವರು ಅಭಿಪ್ರಾಯ ಪಡುತ್ತಾರೆ.



