ಪುಣಚ: ಸೇತುವೆ ನಿರ್ಮಾಣದ ಕಾಮಾಗಾರಿಯ ವೇಳೆ ಮುರಿದು ಬಿದ್ದ ಕಾಂಗ್ರೆಟ್ ಬೀಮ್ ; ಇಬ್ಬರು ಕಾರ್ಮಿಕರು ಗಂಭೀರ.

ಪುಣಚ: ಸೇತುವೆ ಕಾಮಾಗಾರಿ ವೇಳೆ ಕಾಂಗ್ರೆಟ್ ಬೀಮ್ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ಪುಣಚ ಗ್ರಾಮದ ಬರೆಂಜ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಕಾರ್ಮಿಕನೋರ್ವ ಸುಮಾರು 1 ಗಂಟೆಗಳ ಕಾಲ ಸಿಲುಕಿಕೊಂಡು ಕಾಲು ಜಖಂಗೊಂಡು ನರಳಾಡುತ್ತಿದ್ದ. ಸ್ಥಳೀಯರ ಸಹಾಯದಿಂದ ಸಿಲುಕಿಕೊಂಡ ಕಾರ್ಮಿಕನನ್ನು ಮೇಲಕ್ಕೆತ್ತಲಾಗಿದೆ. ತಕ್ಷಣವೇ ಗಂಭೀರ ಗಾಯಗೊಂಡ ಕಾರ್ಮಿಕರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರದ ಗುತ್ತಿಗೆ ಆಧಾರದ ಮೇಲೆ ಕೆಲಸದ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

News Editor

Learn More →

Leave a Reply

Your email address will not be published. Required fields are marked *