ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೆ ಏಪ್ರಿಲ್ 6 ರಿಂದ ಐದು ದಿನಗಳ ಚೆಂಡು ನಡೆಯಲಿದೆ.

ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ಏಪ್ರಿಲ್ 6 ರಿಂದ ಐದು ದಿನಗಳ ಚೆಂಡು ನಡೆಯಲಿದೆ.

ಈ ಪೊಳಲಿ ಚೆಂಡನ್ನು ಮೂಡಬಿದ್ರೆಯಲ್ಲಿ ತಯಾರಿಸಿ ಪುತ್ತಿಗೆಯಿಂದ ಮಳಲಿ ಮೂಲಕ ಪೊಳಲಿ ದೇಗುಲಕ್ಕೆ ಶನಿವಾರ ತರಲಾಯಿತು. ಪುತ್ತಿಗೆಯಿಂದ ಪೊಳಲಿಗೆ ಚೆಂಡನ್ನು ತರುವ ಜವಾಬದ್ದಾರಿ ಮಳಲಿ ಕಡಪುಕರಿಯ ಗಾಣಿಕ ಸಮಾಜದವರದ್ದು. ಪೊಳಲಿ ದೇವಸ್ಥಾನವವು ಮೂಡಬಿದ್ರೆ ಪುತ್ತಿಗೆ ಚೌಟ ಅರಸರ ಆಡಳಿತಕ್ಕೆ ಒಳಪಟ್ಟ ಕಾಲದಲ್ಲಿ ಪುತ್ತಿಗೆ ಚೌಟ ಅರಸರ ಸೋಮನಾಥ ದೇವಾಲಯದಿಂದ ಹೊರಡುವ ಚರ್ಮದ ಚೆಂಡಿನ ಮೆರವಣಿಗೆ ರಾಣಿ ಅಬ್ಬಕ್ಕನ ಊರಾದ ಮಳಲಿಗೆ ಬಂದು ಚೌಟ ವಶಂಸ್ಥ ಅಬ್ಬಕ್ಕನ ಮಣೇಲ್ ಅರಮನೆಯಲ್ಲಿ ರಾಣಿಯ ಸಮ್ಮುಖದಲ್ಲಿ ಚೆಂಡನ್ನು ಇಟ್ಟು, ಪ್ರದರ್ಶಿಸಲಾಗುತ್ತದೆ.

ಕಟ್ಟೆಮಾರ್ ಮನೆಯವರು ಮುಂದುವರಿಸಿಕೊಂಡು ಬಂದಿದ್ದು, ಮನೆಯವರು ನಿನ್ನೆ ಚೆಂಡಿಗೆ ರಾಜಮರ್ಯಾದೆ ಸಲ್ಲಿಕೆಯ ಸಂಪ್ರದಾಯವನ್ನು ನಡೆಸಿದ್ದಾರೆ. ನೆರೆದ ಊರಿನ ಜನರ ಸಂಭ್ರಮಾಚರಣೆಯ ಬಳಿಕ ಚೆಂಡಿಗೆ ಸಲ್ಲಬೇಕಾದ ಗೌರವಯುತವಾದ ರಾಜಮರ್ಯಾದೆ ಸಲ್ಲಿಕೆಯಾದ ನಂತರ ಮಣೇಲ್‌ನಿಂದ ಪೊಳಲಿಗೆ ಚೆಂಡನ್ನು ಹೋಗುವ ಪದ್ಧತಿ ನಡೆಯುತ್ತಿತ್ತು ಎಂದು ಇತಿಹಾಸಗಳಿಂದ ತಿಳಿದುಬರುತ್ತದೆ. ಅಬ್ಬಕ್ಕನ ಕಾಲಾನಂತರ ಈ ಪದ್ಧತಿಯನ್ನು ಕಟ್ಟೆಮಾರ್ ಮನೆತನದವರು ಮುಂದುವರಿಸುತ್ತಾ ಬರುತ್ತಿದ್ದಾರೆ. ಈಗಲೂ ಚೆಂಡಿನ ಮೆರವಣಿಗೆ ಮಳಲಿ ಕಟ್ಟೆಮಾರು ಮನೆಗೆ ಬರುವ ಸಂಪ್ರದಾಯ ಸಾಂಕೇತಿಕವಾಗಿ ಮುಂದುವರಿದಿದೆ. ಪುತ್ತಿಗೆಯಿಂದ ತಂದ ಚೆಂಡನ್ನು ಮನೆಯಂಗಳದಲ್ಲಿಟ್ಟು ಪ್ರದರ್ಶಿಸಲಾಗುತ್ತದೆ.

News Editor

Learn More →

Leave a Reply

Your email address will not be published. Required fields are marked *