
ಸತ್ಯಜಿತ್ ಸುರತ್ಕಲ್ ಅವರ ಹೇಳಿಕೆಗೆ ಸತೀಶ್ ಕುಂಪಲರವರಿಂದ ಟಾಂಗ್
ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಬೂತ್ ಸಮಿತಿ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ವಿವಿಧ ಮೋರ್ಚಾಗಳ ಹಾಗೂ ಮಂಡಲ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಹಾಗೂ ಕಾರ್ಯಕರ್ತರ ಸಮಾವೇಶವು ಇತ್ತೀಚೆಗೆ ನಡೆಯಿತು. ಈ ಸಂಧರ್ಭದಲ್ಲಿ ಅತಿಥಿಯಾಗಿ ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, “ನಮ್ಮದೇ ಸಮುದಾಯದವರಾದ ಅವರು ಹೇಳಿದ್ರು ಈ ಸಲ ಈ ಜಾತಿಯ ಕಾರಣಕ್ಕೋಸ್ಕರ ಬದಲಾವಣೆ ಮಾಡಬೇಕು ಎಂದು ಬಿಜೆಪಿ ಗೆ ತಿರುಗಿ ಬಿದ್ದಿದಾರೆ. ಅವರಿಗೆ ಈ ಮೂಲಕ ಹೇಳಲು ಇಚ್ಚೆ ಪಡುತ್ತೇನೆಯೇನೆಂದರೆ, ನಾನು ಸತ್ಯಜಿತ್ ಸುರತ್ಕಲ್ ಅವರದ್ದೇ ಸಮುದಾಯದವನಾಗಿದ್ರೂ ಕೂಡಾ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರು ನಾನು ಚುನಾವಣೆ ನಿಂತಾಗ ನನ್ನ ಕ್ಷೇತ್ರಕ್ಕೂ ಬಂದಿಲ್ಲ, ನನ್ನ ಪರವಾಗಿ ಪ್ರಚಾರ ಕೂಡಾ ಮಾಡಿಲ್ಲವಾಗಿದೆ. ಚುನಾವಣಾ ಸಂಧರ್ಭದಲ್ಲಿ ಒಂದು ದಿನ, ಒಂದು ಘಂಟೆ, ಒಂದು ನಿಮಿಷ ಕೂಡಾ ಅವರು ಬಂದಿಲ್ಲ. ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಬಂದಿದ್ದಾರೆ, ಹರೀಶ್ ಪೂಂಜ ರವರಿಗೆ ಕಿರಿಕಿರಿ ಇದ್ರೂ ಕೂಡಾ ಇಲ್ಲಿಗೆ ಬಂದು ಸಪೋರ್ಟ್ ಮಾಡಿದ್ದಾರೆ. ಭರತ್ ಶೆಟ್ಟಿಯವರು ಕೂಡಾ ಬಂದಿದ್ದಾರೆ. ನಮ್ಮ ಜಿಲ್ಲೆಯ ಎಲ್ಲರೂ ಬಂದು ಕೆಲಸ ಮಾಡಿದ್ದಾರೆ. ಈಗ ಮಾತ್ರ ಈ ಸಲ ಇವರಿಗೆ ಚೇಂಜ್ ಮಾಡ್ಬೇಕು, ಅವರಿಗೆ ಚೇಂಜ್ ಮಾಡ್ಬೇಕು ಎಂದು ಹೇಳಿಕೆಯನ್ನೆಲ್ಲಾ ಕೊಟ್ಟಿದ್ದಾರೆ. ನಮ್ಮ ಸಮಾಜದವರಾಗಿ ನನಗೆ ಬೇಸರವಾಗುತ್ತದೆ. ನಾನು ಅವರ ಹತ್ತಿರ ಪ್ರಶ್ನೆ ಮಾಡುವುದೇನೆಂದರೆ ನಿಮಗೆ ಕಾಂಗ್ರೆಸ್ ವ್ಯಾಮೋಹವೇ…?, ಹಿಂದೂವಿರೋಧಿ ಆಲೋಚನೆಯೇ…? ಎಂದು ಪ್ರಶ್ನಿಸಿದ್ದಾರೆ.
“ನಾವೆಲ್ಲಾ ಹಿಂದುತ್ವದ ಆಧಾರದ ಮೇಲೆ ಸಂಘಟನೆಯಲ್ಲಿ ಕೆಲಸಮಾಡಿಕೊಂಡು ಬಂದವರು. ನಮಗೆ ಧರ್ಮ ಮೊದಲು, ಧರ್ಮಕಿಂತ ಇನ್ನೊಂದು ಬೇರೇನಿಲ್ಲ, ಧರ್ಮ ಉಳಿದರೆ ಮಾತ್ರ ನಮ್ಮ ಜಾತಿಯ ವ್ಯವಸ್ಥೆ ಉಳಿಯಬಹುದು. ಆದ್ದರಿಂದ ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ, ಯಾವುದೇ ಜಾತಿ, ಯಾವುದೇ ಇನ್ನಿತರ ವಿಷಯಗಳು ಮುಂದುವರಿಯುವುದು ನಮ್ಮ ದೇಶ ಉಳಿದರೆ ಮಾತ್ರವಾಗಿದೆ. ಇದು ರಾಷ್ಟ್ರೀಯ ಚುನಾವಣೆಯಾದುದರಿಂದ ದೇಶದ ಭವಿಷ್ಯದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ನನಗೆ ಕೆಲವು ಸಲ ಅನಿಸುವುದೇನೆಂದರೆ, ನಿಮ್ಮ ಹತ್ತಿರ ಸತ್ಯಜಿತ್ ಸುರತ್ಕಲ್ ಬರಲಿಲ್ಲವೇ ಎಂದು ಕೇಳಿದಾಗ ನನಗೂ ಕೂಡಾ ಬೇಸರವಾಗುತ್ತಿತ್ತು. ಆದರೆ ಈಗ ಅನಿಸುತ್ತದೆ ಅವರಿಗೆ ಖಾದರ್ ನ ವ್ಯಾಮೋಹವೇನಾದ್ರೂ ಬಂದಿತ್ತೇಯೆಂದು. ಇಲ್ಲದಿದ್ದರೆ ಯಾಕೆ ಈ ತರಹ ಮಾಡುತ್ತಾರೆ. ಈ ಕಾಂಗ್ರೆಸ್ ನ ವ್ಯಾಮೋಹ, ಖಾದರ್ ನ ವ್ಯಾಮೋಹದಿಂದಾಗಿ ಈ ತರಹ ಮಾಡಿದ್ರಾ ಎಂಬ ಗಂಭೀರವಾದ ಆಲೋಚನೆ ನಮ್ಮ ಮನಸ್ಸಿನಲ್ಲಿ ಮೂಡುತ್ತಿದೆ ಎಂದು ಸತೀಶ್ ಕುಂಪಲ ಹೇಳಿದರು.


