ಕಾರ್ಕಳ : ಮನೆಮಂದಿ ಮಲಗಿದ್ದ ವೇಳೆ ಲಕ್ಷಾಂತರ ರೂ. ಲಪಟಾಯಿಸಿದ ಖದೀಮರು 

ಕಾರ್ಕಳ : ಮನೆಮಂದಿ ಮಲಗಿದ್ದ ವೇಳೆ ಕಳ್ಳರು ಕಿಟಕಿಯ ಬಾಗಿಲ ಚಿಲಕ ಮುರಿದು ಮನೆಯ ಒಳನುಗ್ಗಿ ಕೋಣೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ 2.25 ಲಕ್ಷ ನಗದು ದೋಚಿದ ಘಟನೆ ಕಾರ್ಕಳದ ಕುಕ್ಕುಂದೂರು ನಲ್ಲಿ ನಡೆದಿದೆ.

ರೈಸ್ ಮಿಲ್ ಉದ್ಯಮಿ ಜೋಡುರಸ್ತೆಯ ಸಾರಸ್ವತನಗರದ ಜಗದೀಶ ಬಿ. ಎ. ಅವರ ಮನೆಯಿಂದ 2,25,000 ರೂ. ಹಣ ಕಳವುಗೈದ ಘಟನೆ ಸಂಭವಿಸಿದೆ. ಮಾ. 25ರ ಮುಂಜಾನೆ 3-40 ಗಂಟೆಗೆ ತೆರೆದ ಶಬ್ದ ಕೇಳಿ ಎದ್ದು ನೋಡಿದಾಗ ಮನೆಯ ಮುಂದಿನ ಬಾಗಿಲು ಅರ್ಧ ತೆರೆದಿದ್ದು, ಕಳ್ಳರು ಕಿಟಕಿಯ ಚಿಲಕವನ್ನು ತುಂಡರಿಸಿ ಬಾಗಿಲಿನ ಚಿಲಕವನ್ನು ಕಿಟಿಕಿಯ ಮೂಲಕ ತೆರೆದು ಮನೆಯೊಳಗೆ ಪ್ರವೇಶಿಸಿ ಕೋಣೆಯೊಳಗೆ ಕಪಾಟಿನಲ್ಲಿ ಇಟ್ಟಿದ್ದ 2,25,000 ರೂ. ಹಣವನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

News Editor

Learn More →

Leave a Reply

Your email address will not be published. Required fields are marked *