ಕುಖ್ಯಾತ ಭೂಗತ ಪಾತಕಿ ಪ್ರಸಾದ್ ಪೂಜಾರಿ ಚೀನಾದಲ್ಲಿ ಬಂಧನ : ಮುಂಬಯಿ ಪೊಲೀಸರ ವಶಕ್ಕೆ

ಮುಂಬಯಿ : ಭಾರತದ ಮೋಸ್ಟ್ ವಾಂಟೆಡ್‌ ಕುಖ್ಯಾತ ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು  ಚೀನಾದ ಹಾಂಕಾಂಗ್ ನಲ್ಲಿ ಪೊಲೀಸರು ಬಂಧಿಸಿದ್ದು ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ‌ ತಿಳಿಯಲಾಗಿದೆ.

ಮೂಲತಃ ಉಡುಪಿ ಜಿಲ್ಲೆಯ ಕಾಪು ಪರಿಸರ ನಿವಾಸಿಯಾಗಿರುವ ಪ್ರಸಾದ್ ಪೂಜಾರಿ ಮೇಲೆ ಮುಂಬಯಿ ಸೇರೊಇದಂತೆ ದೇಶದ ವಿವಿಧ ಭಾಗಗಗಲ್ಲಿ ಹಲವಾರು ಕೇಸ್ ಗಳಿದ್ದು ಈತ ಕೊಲೆ,ಕೊಲೆ ಯತ್ನ ಹಾಗೂ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಪ್ರಸಾದ್ ಪೂಜಾರಿ ಮೊದಲು ರವಿ ಪೂಜಾರಿ ಜೊತೆಗೆ ಗುರುತಿಸಿಕೊಂಡಿದ್ದು,ನಂತರ ತನ್ನದೇ ಗ್ಯಾಂಗ್ ರಚಿಸಿಕೊಂಡು ಬೆದರಿಕೆ ಕರೆಗಳನ್ನು ಮುಂಬಯಿನಲ್ಲಿ ಮಾಡುತ್ತಿದ್ದ.

ಈತ ಚೀನಾದಲ್ಲಿ ತಲೆಮರೆಸಿಕೊಂಡು ಅಲ್ಲಿಯ ಹುಡುಗಿಯನ್ನು ಮದುವೆಯಾಗಿದ್ದ ಎನ್ನಲಾಗಿದೆ.

ಇಂಟರ್ ಪೋಲ್ ನೆರವಿನಿಂದ ಮುಂಬಯಿ ಪೊಲೀಸರ ಮಾಹಿತಿಯಂತೆ ಚೀನಾ ಪೊಲೀಸರು ಪ್ರಸಾದ್ ಪೂಜಾರಿಯನ್ನು ಬಂಧಿಸಿ ವಿಚಾರಣೆ ನಡೆಸಿ ಬಳಿಕ ಭಾರತಕ್ಕೆ ಗಡಿಪಾರು ಮಾಡಿದ್ದಾರೆ. 2019 ರಲ್ಲಿ ಶಿವಸೇನಾ ಕಾರ್ಯಕರ್ತ ಚಂದ್ರಕಾಂತ್ ಜಾಧವ್ ಮೇಲೆ ಗುಂಡು ಹಾರಿಸಿದ ಪ್ರಕರಣ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದ.

News Editor

Learn More →

Leave a Reply

Your email address will not be published. Required fields are marked *