ಮಲ್ಪೆ: ಸ್ಕೂಟರ್‌ನ ಒಳಗೆ ಇಟ್ಟಿದ್ದ ನಗದು ಕಳ್ಳತನ.

ಮಲ್ಪೆ: ಉಡುಪಿ ನಗರದ ಮಲ್ಪೆ ಸಮೀಪ ಕಳ್ಳನೊಬ್ಬ ಹೊಂಚು ಹಾಕಿ ಸ್ಕೂಟರ್‌ನ ಒಳಗೆ ಇಟ್ಟಿದ್ದ 1.5 ಲಕ್ಷ ರೂ. ನಗದನ್ನು ಎಗರಿಸಿರುವ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸಂಭವಿಸಿದೆ.

ಶ್ರೀಕಾರ್‌ ಬೋಟಿನ ರೈಟರ್‌ ಆಗಿದ್ದ ಶಮಿತ್‌ ಅವರು ಮೀನು ಮಾರಾಟದ ಬಿಲ್ಲಿನ 1.5 ಲಕ್ಷ ರೂ. ಹಣವನ್ನು ಪೌಚ್‌ನಲ್ಲಿ ಹಾಕಿ ಸ್ಕೂಟರ್‌ನ ಢಿಕ್ಕಿಯಲ್ಲಿಟ್ಟು ಬೀಗ ಹಾಕಿ ಇನ್ನೊಂದು ಮೀನು ಪಾರ್ಟಿ ಕಚೇರಿಗೆ ಹೋಗಿದ್ದರು. ಅಲ್ಲಿಂದ ಮರಳಿ ಬಂದು ಪರಿಶೀಲಿಸಿದಾಗ ಢಿಕ್ಕಿಯಲ್ಲಿದ್ದ ಹಣದ ಪೌಚ್‌ ಇರಲಿಲ್ಲ.

ಪಕ್ಕದ ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಓರ್ವ ವ್ಯಕ್ತಿ ಸ್ಕೂಟರಿನ ಸೀಟ್‌ ಅನ್ನು ಕೈಯಲ್ಲಿ ಎತ್ತಿ ಹಣವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. 

ಪಕ್ಕದ ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಓರ್ವ ವ್ಯಕ್ತಿ ಸ್ಕೂಟರಿನ ಸೀಟ್‌ ಅನ್ನು ಕೈಯಲ್ಲಿ ಎತ್ತಿ ಹಣವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.

ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?