



ಮಂಗಳೂರು: ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ಯುವಜನ ಜಾಥಾ ಮಂಗಳೂರು ಹೊರವಲಯದ ವಾಮಂಜೂರು ಜಂಕ್ಷನ್ ನಿಂದ ಇಂದು ಪ್ರಾರಂಭಗೊಂಡಿದೆ.

ಖ್ಯಾತ ಯುವ ಕವಿ ವಿಲ್ಸನ್ ಕಟೀಲ್ ಎರಡನೇ ದಿನದ ಜಾಥಾಕ್ಕೆ ಚಾಲನೆಯನ್ನು ನೀಡಿದ್ದಾರೆ.ಈ ವೇಳೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಹಿರಿಯ ನೇತಾರ ಕರಿಯ.ಕೆ, ಶೇಖರ್ ವಾಮಂಜೂರು, ಸುನೀಲ್ ಕುಮಾರ್ ಬಜಾಲ್, ವಿದ್ದು ಉಚ್ಚಿಲ್, ದಿನೇಶ್ ಬೊಂಡಂತಿಲ, ಚಂದ್ರಹಾಸ ತಾರಿಗುಡ್ಡೆ, ಶ್ರೀಮತಿ ಭವಾನಿ, ಕೊರಗ ಸಮುದಾಯದ ಮಂಜುಳಾ, ಸುನೀತಾ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.ಡಿವೈಎಫ್ಐ ಯುವಜನ ಜಾಥಾದ ನೇತೃತ್ವವನ್ನು ವಹಿಸಿದ್ದ ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ನಿತಿನ್ ಕುತ್ತಾರ್, ಚರಣ್ ಪಂಜಿಮೊಗರು, ಮಾಧುರಿ ಬೋಳಾರ ಮುಂತಾದವರು ಉಪಸ್ಥಿತರಿದ್ದರು.
