
500 ವರ್ಷಗಳ ಭವ್ಯ ಇತಿಹಾಸವಿರುವ ಮಾದನಗೇರಿಯ ಮಹಾಲೆ ಮನೆಯಲ್ಲಿ ಚೌತಿಯಂದು ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿ ವಿಸರ್ಜಜನೆ ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು.

ಡಿ.ಜೆ. ಅಬ್ಬರವಿಲ್ಲದೆ ಸಾಂಪ್ರದಾಯಿಕ ಪದ್ದತಿಯಲ್ಲಿ ವಾದ್ಯಘೋಷ, ಚಂಡೆನಾದ ಗೊಂಬೆ ವೇಷಧಾರಿಗಳು, ಹಲವು ಅಣಕು ದೃಶ್ಯಾವಳಿಗಳು, ಜನರ ನೃತ್ಯದೊಂದಿಗೆ ಸಾಗಿದ ಮೆರವಣಿಗೆ ಮಹಾಲೆ ಮನೆಯಿಂದ ಮೂಲಕೇರಿಯವರೆಗೆ ಅಂದರೆ 2 ಕಿ.ಮೀ.ಗೂ ಹೆಚ್ಚು ದಾರ ಬಹು ಆಕರ್ಷವಾಗಿ ಸಾಗಿತು. ವಿಶೇಷ ಅಲಂಕಾರದೊಂದಿಗೆ ವಾಹನದಲ್ಲಿ ಕುಳಿತ ಗಣೇಶ ಎಲ್ಲರ ಗಮನ ಸೆಳೆಯಿತು. ಮುಂದಿನ ವರ್ಷ ಮತ್ತೆ ಬಂದು ಹರಸು ಎಂದು ಜನರು ವಿನಾಯಕನಲ್ಲಿ ಪ್ರಾರ್ಥಿಸಿ ಬೀಳ್ಕೊಟ್ಟರು. ಮಹಾಲೆ ಕುಟುಂಬದವರು ಹಾಗೂ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಮಹಾಲೆ ಮನೆತನದವರು ತಲತಲಾಂತರದಿಂದ ಗಣಪತಿ ಮೂರ್ತಿ ತಯಾರಿಸುವುದರ ಜೊತೆ ಮನೆಯಲ್ಲಿ ಪ್ರತಿಷ್ಠಾಪಿಸಿ ಆರಾಧಿಸುತ್ತಾ ಬಂದಿದ್ದು, ಮನೆಯಲ್ಲಿನ ಗಣೇಶನಾದರೂ ರಾಜ್ಯದ ವಿವಿದೆಡೆ ಹಾಗೂ ಹೊರ ರಾಜ್ಯದಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ ಅಲ್ಲದೆ 15 ದಿನಗಳ ಕಾಲ ಆರಾಧನೆ ನಡೆಯುವುದು ಮತ್ತೊಂದು ವಿಶೇಷವಾಗಿದೆ.
