ಆಸ್ತಿಗಾಗಿ ತಂದೆಯನ್ನೇ ಟ್ರ್ಯಾಪ್‌ ಮಾಡಲು ಹೋಗಿ ಸಿಕ್ಕಿಬಿದ್ದ ಮಗ

ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಆಸ್ತಿಗಾಗಿ ಜನ್ಮಕೊಟ್ಟ ತಂದೆಗೆ ಖೆಡ್ಡಾ ತೋಡಿದ್ದ ಮಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಗ ಪ್ರಣಬ್ ಹಾಗೂ ಮಹೇಶ, ಈಶ್ವರ್, ಪ್ರೀತಮ್ ಎಂದು ಗುರುತಿಸಲಾಗಿದೆ.ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಸತೀಶ್, ಮದ್ದೂರು ಸೇರಿದಂತೆ ರಾಜ್ಯದ ಹಲವೆಡೆ ʻರಾಣಿ ಐಶ್ವರ್ಯ ಡೆವಲಪರ್ಸ್ʼ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ. ಆದರೆ ಮಗ ಪ್ರಣಬ್ ತಂದೆ ಜೊತೆಗೆ ಆಸ್ತಿ ವಿಚಾರದಲ್ಲಿ ಕಿರಿಕ್‌ ಮಾಡಿಕೊಂಡಿದ್ದ. ಈಗಾಗಲೇ ತಂದೆಯ ಕೋಟ್ಯಂತರ ರೂಪಾಯಿ ಲಾಸ್‌ ಮಾಡಿದ್ದಲ್ಲದೇ ಮತ್ತೆ ಹಣದ ಬೇಡಿಕೆಯಿಟ್ಟಿದ್ದ. ಆಸ್ತಿಯ ದುರಾಸೆಗೆ ಬಿದ್ದ ಮಗ, ದುಶ್ಚಟಗಳಿಗೆ ಬಲಿಯಾಗಿ ತನ್ನ ವಿರೋಧಿಗಳ ಜೊತೆಗೂಡಿ ತಂದೆಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಪ್ರಣಬ್ ತಂದೆಯನ್ನೇ ಬ್ಲ್ಯಾಕ್‌ ಮೇಲ್‌ ಮಾಡಲು ಮುಂದಾಗಿದ್ದು, ತಂದೆಯ ಭಾವಚಿತ್ರಕ್ಕೆ ಅಶ್ಲೀಲ ಫೋಟೋ ಹಾಗೂ ವಾಯ್ಸ್ ಎಡಿಟ್ ಮಾಡಿ, ವಾಟ್ಸಪ್ ಗ್ರೂಪ್‌ಗೆ ಶೇರ್‌ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮದ್ದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಕೋಟ್೯ ನ್ಯಾಯಾಂಗ ಬಂಧನ ವಿಧಿಸಿದೆ.

News Editor

Learn More →

Leave a Reply

Your email address will not be published. Required fields are marked *