
ಉಡುಪಿ: ಜಿಲ್ಲೆಯಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದ್ದು, ತಡರಾತ್ರಿ ಅಲೆವೂರು ಬಳಿ ಮೂವರು ಮುಸುಕುದಾರಿ ಕಳ್ಳರ ಚಲನವಲನ ಆತಂಕ ಸೃಷ್ಟಿಸಿದೆ.

ಕಳ್ಳರು ಕುಕ್ಕಿ ಕಟ್ಟೆ ಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಅಲೆವೂರು ಕಲ್ಯಾಣ ನಗರದಲ್ಲಿ ಫ್ಲ್ಯಾಟ್ ಒಂದಕ್ಕೆ ನುಗ್ಗಿರುವ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
