ಕ್ರೌನ್ ಇಂಟರ್ನ್ಯಾಷನಲ್ ಹೆಸರಿನಲ್ಲಿ ಅನೈತಿಕ ಮಸಾಜ್ ಪಾರ್ಲರ್ದಂಧೆಯ ರೂವಾರಿ ಅನೂಪನನ್ನು ಮಟ್ಟ ಹಾಕಲು ಮೀನ ಮೇಷ

ಮಂಗಳೂರು: ನಗರದ ಹಲವೆಡೆ ಮಸಾಜ್ ಸೆಂಟರ್ ನೆಪಗಳಲ್ಲಿ ಅಕ್ರಮವಾಗಿ ಅನೈತಿಕ ದಂಧೆ ಆಗುವ ಕುರಿತು ಮಾಧ್ಯಮಗಳು ಪದೇ ಪದೇ ವರದಿ ಭಿತ್ತರಿ ಪೊಲೀಸ್ ಇಲಾಖೆಯನ್ನು ಕಣ್ತೆರೆಸುವ ಕಾರ್ಯಮಾಡಿತ್ತು. ಮಂಗಳೂರು ನಗರದದಾಂತ್ಯ ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ ಹೆಸರಿನಲ್ಲಿ ಮಸಾಜ್ ಸೆಂಟರ್ ನಡೆಸುತ್ತಿರುವ ಘಟನೆಯ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ನಡೆಸಿ ಅಕ್ರಮಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು. ಆದ್ರೆ ನಾಯಿ ಬಾಲ ಡೊಂಕು ಎಂಬಂತೆ ಮತ್ತದೇ ಚಾಳಿ ಮುಂದುವರಿದಿದೆ.

ನಗರದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್ ಪೈಕಿ ಫೈವ್ ಸ್ಟಾರ್ ಗೋಲ್ಡ್ ಫಿಂಚ್ ಹೋಟೆಲ್ ನ ಕೆಳ ಅಂತಸ್ತಿನಲ್ಲಿರುವ ಅನೂಪ್ ಎಂಬಾತನ “ಕ್ರೌನ್ ಇಂಟರ್ ನ್ಯಾಷನಲ್” ಎಂಬ ಹೆಸರಿನ ಯೂನಿಸೆಕ್ಸ್ ಸೆಲೂನ್ ಅಕ್ರಮಗಳ ಅಡ್ಡೆಯಾಗಿದೆ. ಪೊಲೀಸರು ಲಗಾಮು ಹಾಕಿದ್ದರೂ ಮತ್ತೆ ಅದೇ ಚಾಳಿ ಮುಂದುವರಿದಿದೆ. ಮತ್ತಿನಲ್ಲಿ ಬರುವವರಿಗೆ ರೀಲಾಕ್ಸ್ ಮಾಡಲು ಹೆಣ್ಣುಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ನಿಜಕ್ಕೂ ಯುವತಿಯರನ್ನು ದುಷ್ಟಟಕ್ಕೆ ದೂಡುವ ಯತ್ನ ಎಂದರೂ ತಪ್ಪಾಗಲಾರದು.

ಕ್ರೌನ್ ಇಂಟರ್ ನ್ಯಾಷನಲ್” ಯೂನಿಸೆಕ್ಸ್ ಸೆಲೂನ್ ಒಳಗಡೆ ನಡೆಯುತ್ತಿರುವುದು ಬರೀ ಮಸಾಜ್ ಮಾತ್ರವಲ್ಲ ಅನೈತಿಕ ದಂಧೆಯೂ ಹೌದು . ಮಾಧ್ಯಮಗಳು ನಿರಂತರ ವರದಿ ನಂತರ ಕೆಲವು ಮಸಾಜ್ ಪಾರ್ಲರ್ ಗಳಿಗೆ ಬೀಗ ಜಡಿದ ಮೇಲೆ, ಪರಿಚಯಸ್ಥರ ಮುಖೇನ ಬಂದರೆ ಮಾತ್ರ ಅಪಾಯಿಂಟ್ ಮೆಂಟ್ ಸಿಗುವಷ್ಟು ಈ ಸೆಲೂನ್ ಮುಂದುವರೆದಿತ್ತು. ಆದರೆ ಇದೀಗ ಈ ಕ್ರೌನ್ ಇಂಟರ್ ನ್ಯಾಷನಲ್ ಮಸಾಜ್ ಸೆಂಟರ್ ನಲ್ಲಿ ರಾಜಾರೋಷವಾಗಿ ಅನೈತಿಕ ದಂಧೆ ಶುರು ಹಚ್ಚಿಕೊಂಡಿದ್ದಾರೆ. ಮಂಗಳೂರಿನಲ್ಲಿ ಮಸಾಜ್ ಸೆಂಟರ್‌ಗಳಿಗೆಲ್ಲ ಬೀಗ ಬಿದ್ದಿದೆ ಎನ್ನುವಷ್ಟರಲ್ಲೇ ನಗರದಲ್ಲಿ ನಾಯಿಕೊಡೆಗಳಂತೆ “ಕ್ರೌನ್ ಇಂಟರ್ ನ್ಯಾಷನಲ್” ಯೂನಿಸೆಕ್ಸ್ ಸೆಲೂನ್ ಮತ್ತೆ ತನ್ನ ಚಾಳಿ ಮುಂದುವರಿಸಿದೆ. 

ಪೊಲೀಸರ ಭಯವಿಲ್ಲದೆ ರಾಜಾರೋಷವಾಗಿ ಮತ್ತೆ ಕಾರ್ಯ ಮಾಡಬೇಕಾದರೆ ಇಲ್ಲಿ ಯಾವುದೇ ಕಾಣದ ಪ್ರಬಲ ಕೈವೊಂದು ಕೆಲಸ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇಂತಹ ಅಕ್ರಮಕ್ಕೆ ಮಂಗಳೂರಿನ ಮಾನ್ಯ ಕಮೀಷನರ್ ಅನುಪಮ್ ಅಗರ್ವಾಲ್ ಅವರು ಸಂಪೂರ್ಣವಾಗಿ ಬ್ರೇಕ್ ಬೀಳುವ ಹಾಗೆ ಮಾಡಿ ಮತ್ತೆ ಯಾವತ್ತೂ ಇತಂಹ ದಂಧೆ ತಲೆ ಎತ್ತದ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

News Editor

Learn More →

Leave a Reply

Your email address will not be published. Required fields are marked *