ಪುತ್ತೂರಿನಲ್ಲಿ ಸಂಚಲನ ಮೂಡಿಸಿದ್ದ ಹಂದಿ ಸಾವು ಪ್ರಕರಣ ಸುಖಾಂತ್ಯ ಕಂಡಿದೆ. ಗಾಯಗೊಂಡ ಹಂದಿಯನ್ನು ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಸ್ತಾಂತರಿಸಿದ್ದು, ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದ ಮೃತ ಹಂದಿಯನ್ನು ಅರಣ್ಯ ಇಲಾಖೆಯಿಂದ ಸಂಸ್ಕಾರ ಮಾಡಲಾಗಿದೆ.

ಸೋಮವಾರ ಪುತ್ತೂರಿನ ಮಾಣಿ ಮೈಸೂರು ಹೆದ್ದಾರಿಯ ಬೈಪಾಸ್ ನಲ್ಲಿ ರಸ್ತೆ ದಾಟುತ್ತಿದ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಹಂದಿಗಳು ಗಾಯಗೊಂಡಿತು. ಗಾಯಗೊಂಡ ಹಂದಿಗಳನ್ನು ಸಾರ್ವಜನಿಕರು ತಮ್ಮ ವಾಹನಗಳಲ್ಲಿ ತುಂಬಿ ಕೊಂಡೊಯ್ದಿದ್ದರು ಆದರೆ ಹಂದಿಗಳನ್ನ ಯಾವ ಸ್ಥಳಕ್ಕೆ ಕೊಂಡೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿರಲಿಲ್ಲ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಗಾಯಗೊಂಡ ಹಂದಿಯನ್ನು ಹಸ್ತಾಂತರಿಸಿದ್ದು ಗಂಭೀರ ಗಾಯಗೊಂಡು ಸೋಮವಾರ ರಾತ್ರಿ ಸಾವನ್ನಪ್ಪಿದ ಹಂದಿಯ ಮೃತ ದೇಹವನ್ನು ಅರಣ್ಯ ಇಲಾಖೆಯಿಂದ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಬಗ್ಗೆ ಪುತ್ತೂರು ವಲಯ ಅರಣ್ಯ ಅಧಿಕಾರಿ ಕಿರಣ್ ಬಿ ಎಂ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದು ಪ್ರಕರಣಕ್ಕೆ ತೆರೆ ಬಿದ್ದಿದೆ.

News Editor

Learn More →

Leave a Reply

Your email address will not be published. Required fields are marked *