
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ವ್ಯಕ್ತಿಯೊಬ್ಬರ ಬಳಿ ಕಸ್ಟಮ್ ಅಧಿಕಾರಿಗಳು ಎಂದು ಹೇಳಿ ಅವರ ಹತ್ತಿರ ಇದ್ದ ಚಿನ್ನವನ್ನು ದರೋಡೆ ಮಾಡಿದ ಘಟನೆ ನಡೆದಿದೆ. ಚಿನ್ನ ಕಳೆದುಕೊಂಡ ವ್ಯಕ್ತಿ ಶ್ರೀ ಹರ ಎಂದು ತಿಳಿದು ಬಂದಿದೆ.
ದರೋಡೆಕೋರರು ಇನ್ನೋವಾ ಕಾರಿನಲ್ಲಿ ಬಂದು ದರೋಡೆ ಮಾಡಿ ಹೋಗಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.
ಯಾರೋ ಆರು ಜನ ಆಪಾದಿತರು ಜ್ಯುವೆಲ್ಲರಿ ಶಾಪ್ ನ ಶ್ರೀ ಹರಿಯವರ ಬಳಿ ಇರುವ 350 ಗ್ರಾಂ ತೂಕದ ಬಂಗಾರದ ಗಟ್ಟಿಯನ್ನು ದರೋಡೆ ಮಾಡುವ ಉದ್ದೇಶದಿಂದ ದಿನಾಂಕ; 13-08-2025 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಮಂಗಳೂರು ಸೆಂಟ್ರಲ ರೇಲ್ವೆ ನಿಲ್ದಾಣದ ಹತ್ತಿರದ ಕೈರಾಲಿ ಹೋಟೆಲ್ ಬಳಿ ಆಟೋ ಕಾಯುತ್ತಿದ್ದ ಶ್ರೀ ಹರಿಯವರಲ್ಲಿ, ತಾವು ಕಸ್ಟಮ್ ಅಧಿಕಾರಿಗಳು, ನಿಮ್ಮನ್ನು ಪರಿಶೀಲನೆ ಮಾಡಬೇಕು ತಮ್ಮೊಂದಿಗೆ ಬನ್ನಿ ಅಂತಾ ಗದರಿಸಿ, ಹಿಡಿದುಕೊಂಡು ಬಲವಂತವಾಗಿ 24ಬಿಹೆಚ್8102ಜಿ ಎಂಬ ನಂಬರ್ ಬರೆದುಕೊಂಡಿರುವ ಬಿಳಿ ಬಣ್ಣದ ಇನ್ನೋವಾ ಕಾರಿನ ಬಂದಿರುವ ಖದೀಮರು, ಶ್ರೀ ಹರಿ ಬಳಿ ಇದ್ದ 35,00,000/- ರೂಪಾಯಿ ಬೆಲೆ ಬಾಳುವ 350 ಗ್ರಾಂ ತೂಕದ ಶುದ್ಧ ಬಂಗಾರದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಕುಮಟಾ ಶಿರಸಿ ರಸ್ತೆಯ ಅಂತ್ರವಳ್ಳಿ ಎಂಬ ಊರ ಬಳಿ ಬಿಟ್ಟು ಹೋಗಿರುವುದಾಗಿ ಪ್ರಕರಣ ದಾಖಲಾಗಿದೆ.


