
ಆಹಮದಬಾದ್ ; ಗುಜರಾತ್ ನ ಅಹಮದಾಬಾದ್ ಏರ್ ಪೋರ್ಟ್ ಬಳಿ ವಿಮಾನ ಪತನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗುಜರಾತ್ನ ಮೇಧಾನಿ ನಗರದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಿಮಾನವು ಏರ್ ಇಂಡಿಯಾದ್ದಾಗಿರಬಹುದು ಎಂದು ಹೇಳಲಾಗಿದೆ. ವಿಮಾನದಲ್ಲಿ 242 ಮಂದಿ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


