
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ದಂಧೆ, ಮಸಾಜ್ ಪಾರ್ಲರ್, ಬೆಟ್ಟಿಂಗ್, ವೇಶ್ಯಾವಾಟಿಕೆ ಮುಂತಾದ ದಂಧೆಗಳು ಮತ್ತು ಮತೀಯ ಶಕ್ತಿಗಳ ಒಡನಾಟದಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಸಾಮಾಜಿಕ ಚಿಂತಕರನ್ನು ಒಳಗೊಂಡ ಸಮಾನಮನಸ್ಕರ ತಂಡವು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ತಿಳಿಸಿದೆ.
ಮಂಗಳೂರು, ಜೂನ್ 07, 2025: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ದಂಧೆ, ಮಸಾಜ್ ಪಾರ್ಲರ್, ಬೆಟ್ಟಿಂಗ್, ವೇಶ್ಯಾವಾಟಿಕೆ ಮುಂತಾದ ದಂಧೆಗಳು ಮತ್ತು ಮತೀಯ ಶಕ್ತಿಗಳ ಒಡನಾಟದಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಸಾಮಾಜಿಕ ಚಿಂತಕರನ್ನು ಒಳಗೊಂಡ ಸಮಾನಮನಸ್ಕರ ತಂಡವು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುದ್ವೇಷದ ಕೊಲೆಗಳ ಕುರಿತು ಪರಿಶೀಲನೆಗಾಗಿ ಮಂಗಳೂರಿಗೆ ಭೇಟಿ ನೀಡಿದ್ದ ಹರಿಪ್ರಸಾದ್ ಅವರು, ಶುಕ್ರವಾರ ಸರ್ಕೀಟ್ ಹೌಸ್‌ನಲ್ಲಿ ಸಮಾನಮನಸ್ಕರ ಜಂಟಿ ವೇದಿಕೆಯ ಪ್ರತಿನಿಧಿಗಳ ಜೊತೆ ಎರಡು ತಾಸುಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಜಂಟಿ ವೇದಿಕೆಯ ಪ್ರಮುಖ ಮುನೀರ್ ಕಾಟಿಪಳ್ಳ, “ಮರಳು ದಂಧೆ, ಬೆಟ್ಟಿಂಗ್, ಮಸಾಜ್ ಪಾರ್ಲರ್, ವೇಶ್ಯಾವಾಟಿಕೆಯಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ಮತೀಯ ಗೂಂಡಾಗಳಿಗೆ ಸಹಕಾರ ನೀಡುತ್ತಿದ್ದಾರೆ. ಇವರಿಗೆ ಕಾನೂನಿನ ಯಾವುದೇ ಭಯವಿಲ್ಲದಂತಾಗಿದೆ. ಇಂತಹ ಮನಸ್ಥಿತಿಯಿಂದಾಗಿ ಸಾಮಾನ್ಯ ದ್ವೇಷವೂ ಕೊಲೆಗಳಿಗೆ ಕಾರಣವಾಗುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು


