
ಹೆಬ್ರಿ: ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ಹೆಬ್ರಿ ಇಲ್ಲಿಯ ಸಿಬ್ಬಂದಿ ಶಂಕರ ಎಂಬುವವರು ಸಂಘದ ಹಣವನ್ನು ದುರುಪಯೋಗ ಮಾಡಿರುವ ಬಗ್ಗೆ ಕೇಸು ದಾಖಲಾಗಿದೆ.
ಇವರು ಬ್ಯಾಂಕಿನ 88150/- ರೂ.ನ್ನು ಸುಂದರ ಕುಲಾಲ್ ಎಂಬವವರಿಗೆ ಕೂಲಿ ಬಾಬ್ತು ನೀಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಹಣವನ್ನು ದುರ್ಬಳಕೆ ಮಾಡಿ ಸಂಘಕ್ಕೆ ಮೋಸ ಮಾಡಿರುವುದಾಗಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೊಲೀಸ್ ರಿಗೆ ದೂರು ನೀಡಿದ್ದಾರೆ.
ಶಂಕರ್ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


