ನಾಳೆ (ಮೇ 30): ಸನ್ ಮ್ಯಾಟ್ರಿಕ್ಸ್ ಬ್ಯಾನರಿನಡಿ ತಯಾರಾದ, ಕೆ.ಸತ್ಯೇಂದ್ರ ಪೈ ನಿರ್ಮಾಣದ ಕನ್ನಡ ಸಿನಿಮಾ ’ಸ್ಕೂಲ್ ಲೀಡರ್’ ಬಿಡುಗಡೆ

ನಾಳೆ (ಮೇ ೩೦): ಸನ್ ಮ್ಯಾಟ್ರಿಕ್ಸ್ ಬ್ಯಾನರಿನಡಿ ತಯಾರಾದ, ಕೆ.ಸತ್ಯೇಂದ್ರ ಪೈ ನಿರ್ಮಾಣದ ಕನ್ನಡ ಸಿನಿಮಾ ’ಸ್ಕೂಲ್ ಲೀಡರ್’ ಬಿಡುಗಡೆ

ನಾಳೆ (ಮೇ ೩೦): ಸನ್ ಮ್ಯಾಟ್ರಿಕ್ಸ್ ಬ್ಯಾನರಿನಡಿ ತಯಾರಾದ, ಕೆ.ಸತ್ಯೇಂದ್ರ ಪೈ ನಿರ್ಮಾಣದ ಕನ್ನಡ ಸಿನಿಮಾ ’ಸ್ಕೂಲ್ ಲೀಡರ್’ ಬಿಡುಗಡೆ
ವಿಕ ಸುದ್ದಿಲೋಕ ಪುತ್ತೂರು
ಸನ್ ಮ್ಯಾಟ್ರಿಕ್ಸ್ ಬ್ಯಾನರಿನಡಿ ತಯಾರಾದ, ಕೆ.ಸತ್ಯೇಂದ್ರ ಪೈ ನಿರ್ಮಾಣದ ಬಹು ನಿರೀಕ್ಷಿತ ಕನ್ನಡ ಸಿನಿಮಾ ’ಸ್ಕೂಲ್ ಲೀಡರ್’ ಕರಾವಳಿಯಾದ್ಯಂತ ಮೇ ೩೦ ಶುಕ್ರವಾರ ತೆರೆ ಕಾಣಲಿದೆ. ಉಡುಪಿ, ದ.ಕ. ಜಿಲ್ಲೆಯ ಸುಮಾರು ೧೩ ಥಿಯೇಟರ್ ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು,ನಟ, ಸಹನಿರ್ಮಾಪಕ ಸುದರ್ಶನ್ ಶಂಕರ್ ಮತ್ತು ನಾಯಕ ನಟಿ ದೀಕ್ಷಾ ಡಿ. ರೈತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಟಪಾಡಿಯ ಒಂದೇ ಶಾಲೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಸುಮಾರು ೨೫ ಶಾಲೆಯ ೧೨೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷವಾಗಿದೆ. ಮೊದಲಿಗೆ ದ.ಕ., ಉಡುಪಿ ಜಿಲ್ಲೆಯಲ್ಲಿ ಬಿಡುಗಡೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಶಿವಮೊಗ್ಗ, ಕೊಪ್ಪ, ಕಾಸರಗೋಡು, ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.

ಪೆನ್ಸಿಲ್ ಬಾಕ್ಸ್ ಖ್ಯಾತಿಯ ರಝಾಕ್ ಪುತ್ತೂರು ಚಿತ್ರಕಥೆ, ಸಂಭಾಷಣೆ ಜತೆಗೆ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳ ಶಾಲಾ ಜೀವನ ಹೇಗಿದೆ, ನಾಯಕತ್ವ ಹೇಗೆ ಬೆಳೆಸಬೇಕು ಎಂಬ ಸಂದೇಶವನ್ನು ಚಿತ್ರದ ಮೂಲಕ ನೀಡಲಾಗಿದೆ. ಒಟ್ಟಾರೆಯಾಗಿ ಮಕ್ಕಳು, ಹಿರಿಯರು ಎಲ್ಲರೂ ವೀಕ್ಷಿಸಬಹುದಾದ ಸಿನಿಮಾ ಆಗಿದೆ. ಚಿತ್ರದಲ್ಲಿ ತುಳು ಚಿತ್ರರಂಗದ ದಿಗ್ಗಜರಾದ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಕನ್ನಡದ ಹಿರಿಯ ನಟ ರಮೇಶ್ ಸಹಿತ ಹಲವಾರು ಕಲಾವಿದರು ನಟಿಸಿದ್ದಾರೆ. ನಾಯಕ ನಟಿಯಾಗಿ ದೀಕ್ಷಾ ಡಿ. ರೈ ನಟಿಸಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ , ಸಹನಿರ್ದೇಶಕ ಅಕ್ಷತ್ ವಿಟ್ಲ, ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *