ಮಂಗಳೂರು : ನಗರ ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ,ಎಸ್ಪಿಯಾಗಿ ಡಾ.ಕೆ. ಅರುಣ್ ನೇಮಕ..!

ಮಂಗಳೂರು ; ಮಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ನೇಮಕಮಾಡಲಾಗಿದ್ದು ಎಸ್ಪಿಯಾಗಿ ಡಾ. ಕೆ. ಅರುಣ್ ರವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.

ಉಡುಪಿಯಲ್ಲಿ ಎಸ್ಪಿ ಆಗಿದ್ದ ಅರುಣ್ ಇನ್ನು ದ.ಕ. ಎಸ್ಪಿ ಯಾಗಲಿದ್ದಾರೆ. ಉಡುಪಿ ಎಸ್ಪಿ ಹುದ್ದೆಗೆ ಹರಿರಾಮ್ ಶಂಕರ್ ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಎಸ್ಪಿ ಯತೀಶ್ ಗೆ ಜಾಗ ತೋರಿಸದೆ ವರ್ಗಾವಣೆ ಮಾಡಲಾಗಿದ್ದು
ಅನುಪಮ್ ಅಗರ್ವಾಲ್ ರವರನ್ನು ಬೆಂಗಳೂರು ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗ ಮಾಡಲಾಗಿದೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸುಧೀರ್ ರೆಡ್ಡಿ ಕಡಕ್ ಅಧಿಕಾರಿಯಾಗಿದ್ದು ಅಪರಾಧ ಹೆಚ್ಚಳವಾಗಿರುವ ಹಿನ್ನೆಲೆ ತಡೆಗಟ್ಟಲು ನೇಮಕಮಾಡಲಾಗಿದೆ ಎಂದು ತಿಳಿದುಬಂದಿದೆ.

News Editor

Learn More →

Leave a Reply

Your email address will not be published. Required fields are marked *