
ಪುತ್ತೂರು: ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪುತ್ತೂರಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬುಧವಾರ ರಾತ್ರಿ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಮೊಂಬತ್ತಿ ನಡಿಗೆ ಮತ್ತು ಖಂಡನಾ ಸಭೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯು ಅತ್ಯಂತ ಹೇಯ ಮತ್ತು ಹೀನಾಯವಾಗಿದ್ದು, ಅಮಾಯಕರು ಪ್ರವಾಸಕ್ಕಾಗಿ ಹೋಗುವಾಗ ಬೇರೆ ದೇಶದ ವಿಕೃತ ಮನಸಿನ ಸಂಘಟನೆಯವರು ಬಂದು ಅವರ ಜೀವ ತೆಗೆಯುವುದು ಎಂದು ಹೇಳಿದ್ದರೆ ಇದನ್ನು ಯಾವ ದೇಶವೂ ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ಕೂಡ ಇಬ್ಬರು ಕರ್ನಾಟಕದವರು. ಅವರ ಮನೆಯವರ ಎದುರು ಗುಂಡಿಕ್ಕಿ ಕೊಂದಾಗ ಅವರ ನೋವು ಯಾವ ರೀತಿ ಇರಬಹುದು. ಇದನ್ನು ನಾವು ಯಾರು ಸಹಿಸುವ ವಿಚಾರವಿಲ್ಲ. ಈ ದೇಶದಲ್ಲಿ ನಾವಲ್ಲ ಭಾರತೀಯರು ಎಂದು ದೃಷ್ಟಿಕೋನ ಇಟ್ಟು ಕೊಂಡು ಇಂತಹ ಸವಾಲುಗಳನ್ನು ಮುಂದಿನ ದಿನ ಎದುರಿಸುವ ಕೆಲಸ ಮಾಡಲಿದ್ದೇವೆ. ಇದರಲ್ಲಿ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲುವುದು ಮಾತ್ರವಲ್ಲ ಅವರ ಅಂಗಾAಗಳನ್ನು ಕಟ್ ಮಾಡಿ ವಾರದ ಕೊನೆಗೆ ಅವರ ಶಿರಛೇದನ ಮಾಡಬೇಕು. ಮತ್ತೆ ಇನ್ನೊಬ್ಬ ಇಂತಹ ಕೆಲಸ ಮಾಡಬರದು. ಇದರ ಜೊತೆಗೆ ಇವರಿಗೆ ಸಹಕರಿಸಿದವರನ್ನೂ ಕೂಡಾ ಎನ್ ಕೌಂಟರ್ ಮಾಡಬೇಕು. ಒಂದು ರೀತಿಯಲ್ಲಿ ಪಾಪಿಗಳನ್ನು ಎನ್‌ಕೌಂಟರ್ ಅಲ್ಲ ಪೀಸ್‌ಪೀಸ್ ಮಾಡುವ ಕೆಲಸ ಮಾಡಬೇಕು. ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶಕ್ಕಾಗಿ ನಾವು ಒಟ್ಟಾಗಿದ್ದೇವೆ. ಘಟನೆಯ ಕುರಿತು ಯಾವ ರೀತಿ ಸೇಡನ್ನು ತೀರಿಸಿಕೊಳ್ಳಬಹುದು ಎಂಬುದನ್ನು ಚಿಂತಿಸಬೇಕು. ಇದರಲ್ಲಿ ರಾಜಕೀಯ ಮಡುವುದು ಸರಿಯಲ್ಲ. ದೇಶ ಅಂತ ಬಂದಾಗ ನಾವೆಲ್ಲ ಭಾರತ ದೇಶದ ಪ್ರಜೆಗಳು. ದೇಶಕ್ಕೆ ಯಾರು ವಿರೋಧ ಮಾಡುತ್ತಾರೋ ನಾವು ಅವರ ವಿರೋಧಿಗಳು. ನಾವು ಅದನ್ನು ಯಾವತ್ತೂ ಸಹಿಸುವುದಿಲ್ಲ.
ಭಾರತ ದೇಶದ ವಿರೋಧಿಗಳು ನಮ್ಮ ವಿರೋಧಿಗಳು. ಘಟನೆಯಿಂದ ಪಾಕಿಸ್ತಾನ ದೊಡ್ಡ ಸಾಧನೆ ಮಾಡಿದೆ ಅನ್ನಬಹುದು. ಆದರೆ ಇಡಿ ವಿಶ್ವವೇ ಘಟನೆಯನ್ನು ಖಂಡಿಸುತ್ತಿದೆ. ಇವತ್ತು ಭಾರತ ದೇಶಕ್ಕೆ ಶಕ್ತಿ ಇಲ್ಲ ಎಂತಲ್ಲ.
ನಾವು ಯಾವ ಪಕ್ಷದವರು ಆದರೂ ದೇಶಕ್ಕಾಗಿ ಒಟ್ಟಾಗಿದದ್ದೇವೆ. ದೇಶಕ್ಕಾಗಿ ನಾವು ಪಕ್ಷಾತೀತವಾಗಿ ದೇಶದ ಹಿಂದೆ ನಿಲ್ಲುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಎಂ ಎಸ್ ಮುಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಕೃಷ್ಣಪ್ರಸಾದ್ ಆಳ್ವ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಪುತ್ತೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕೀಮ್ ಡಿಸೋಜಾ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರೆ ಚಂದ್ರಪ್ರಭ ಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮುಹಮ್ಮದ್ ಬಡಗನ್ನೂರು, ಪುತ್ತೂರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಆಝಾದ್, ಶಶಿಕಿರಣ್ ರೈ ರೈ ನೂಜಿ ಬೈಲು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರವಿಪ್ರಸಾದ್ ಶೆಟ್ಟಿ ಬನ್ನೂರು, ಪೂರ್ಣೇಶ್ ಭಂಡಾರಿ, ಶರಣ್ ಸಿಕ್ವೇರ, ಪ್ರಹ್ಲಾದ್ ಬೆಳ್ಳಿಪಾಡಿ, ರಾಜ್ಯ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಪಾರೋಕ್ ಬಾಯಾಬೆ, ಹನೀಫ್ ಪುಣ್ಚತ್ತಾರ್, ದಾಮೋದರ ಭಂಡರ‍್ಕರ್, ನಾಸೀರ್ ಕೋಲ್ಪೆ, ಸುಪ್ರಿತ್ ಕಣ್ಣಾಯ, ನಝೀರ್ ಮಠ, ರಾಮಣ್ಣ ಪಿಲಿಂಜ, ಹರ್ಷದ್ ದರ್ಬೆ, ದಿನೇಶ್, ರಹಿಮಾನ್ ಸಂಪ್ಯ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಉನೈಸ್ ಗಡಿಯಾರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


