
ಮಂಗಳೂರು : ಕಳೆದ ಬಾರಿ ಪುತ್ತೂರಿನಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರಿಗೆ ಬಿಜೆಪಿಯಿಂದ ಸೀಟ್ ಕೊಡುತ್ತಿದ್ದಾರೆ ಇಷ್ಟೋತ್ತಿಗೆ ಶಾಸಕರಾಗುತ್ತಿದ್ದರು ಎಂಬುದು ನೈಜ ಹಿಂದೂ ಕಾರ್ಯಕರ್ತರ ಮಾತು ಹಾಗೂ ಇನ್ನಿತರ ಹರೆಬರೆ ನಾಯಕರ ಮಾತು ಕೇಳಿ ಹೈ ಕಮಾಂಡ್ ಒಂದು ವಿಧಾನ ಸಭಾ ಸೀಟ್ ಕಳೆದುಕೊಂಡಿದೆ ಇದರಲ್ಲೂ ರಾಜಕೀಯ ಇದೆ ಯಾಕೆಂದರೆ ಅಶೋಕ್ ರೈ ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಿಂದ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯದ ಗಮನ ಸೆಳೆದಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಬಿಜೆಪಿ ಸೇರ್ಪಡೆಗೆ ಗಡುವು ವಿಧಿಸಿದೆ ಎಂದು ಮೂಲಗಳು ತಿಳಿಸಿವೆ. ಆದಷ್ಟು ಬೇಗ ನಿರ್ಧಾರ ತಿಳಿಸುವಂತೆ ಗಡುವು ವಿಧಿಸಿರುವುದರ ಜತೆಗೆ ಕೆಲವೊಂದು ಷರತ್ತುಗಳನ್ನೂ ಪುತ್ತಿಲ ಆವರಿಗೆ ಬಿಜೆಪಿ ನಾಯಕರು ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು ಅರುಣ್ ಪುತ್ತಿಲ ಸಮಾಲೋಚನಾ ಸಭೆ ಕರೆದಿದ್ದಾರೆ.

ವಿಧಾನಸಭೆ ಚುನಾವಣೆಯ ನಂತರ ಅವರು ಹುಟ್ಟುಹಾಕಿರುವ ಪುತ್ತಿಲ ಪರಿವಾರದ ಸಭೆ ನಡೆಯಲಿದ್ದು, ಅಂತಿಮ ತೀರ್ಮಾನದ ಬಗ್ಗೆ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಯಲಿದೆ.


