ಮುಳಿಯ ಶೋರೂಮ್ ವಿಸ್ತೃತಗೊಂಡು`ಮುಳಿಯ ಗೋಲ್ಡ್ ಆಂಡ್ ಡೈಮಂಡ್’ನೂತನ ಬ್ರ್ಯಾಂಡ್‌ನೊಂದಿಗೆ ಗ್ರಾಹಕರ ಸೇವೆಗೆ ಸಿದ್ಧ.ಏ.೨೦ರಂದು ಉದ್ಘಾಟನೆ

ಮುಳಿಯ ಶೋರೂಮ್ ವಿಸ್ತೃತಗೊಂಡು
`ಮುಳಿಯ ಗೋಲ್ಡ್ ಆಂಡ್ ಡೈಮಂಡ್’
ನೂತನ ಬ್ರ್ಯಾಂಡ್‌ನೊಂದಿಗೆ ಗ್ರಾಹಕರ ಸೇವೆಗೆ ಸಿದ್ಧ.
ಏ.೨೦ರಂದು ಉದ್ಘಾಟನೆ
ಬ್ರ್ಯಾಂಡ್ ಅಂಬಾಸಿಡರ್ ಚಲನಚಿತ್ರ ನಟ
ರಮೇಶ್ ಅರವಿಂದ ಅವರಿಂದ ಉದ್ಘಾಟನೆ.
ಏ.೨೦ರಿಂದ ೩೦ ದಿನಗಳವರೆಗೆ
ವಿವಿಧ ಕಾರ್ಯಕ್ರಮ
ಏ.೨೮ರಂದು ಅಕ್ಷಯ ತೃತೀಯ
ವಿಶೇಷ ಕಾರ್ಯಕ್ರಮ.

ಪುತ್ತೂರು:೮೧ ವರ್ಷಗಳ ಪರಂಪರೆ ಹೊಂದಿರುವ ಮುಳಿಯ ಸಂಸ್ಥೆಯು ಗ್ರಾಹಕರಿಗೆ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ಪೂರೈಸುತ್ತಾ ಬಂದಿದೆ.೮ ದಶಕಗಳಿಂದ ಗ್ರಾಹಕರು ನಮ್ಮನ್ನು ಹರಸಿ ಬೆಳೆಸಿದ್ದಾರೆ.ಇದೀಗ ಶೋರೂಮ್ ವಿಸ್ತೃತಗೊಂಡು ಹಲವು ಹೊಸತನಗಳೊಂದಿಗೆ `ಮುಳಿಯ ಗೋಲ್ಡ್ ಆಂಡ್ ಡೈಮಂಡ್’ ಹೆಸರಿನಲ್ಲಿ ಗ್ರಾಹಕರ ಸೇವೆಗೆ ಸಿದ್ಧವಾಗಿದೆ.ಏ.೨೦ರಂದು ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಜನಪ್ರಿಯ ಸಿನಿಮಾ ನಟ ರಮೇಶ್ ಅರವಿಂದ್ ವಿಸ್ತೃತ ಶೋರೂಮ್ ಉದ್ಘಾಟನೆಗೊಳಿಸಿ ಗ್ರಾಹಕರಿಗೆ ಸಮರ್ಪಿಸಲಿದ್ದಾರೆ ಎಂದು ಸಂಸ್ಥೆಯ ಚೆಯರ್‌ಮೆನ್ ಕೇಶವಪ್ರಸಾದ್ ಮುಳಿಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಳಿಯ ಸಂಸ್ಥೆ ೨೦೦೮ರಲ್ಲಿ ಕೊಡಗಿನಲ್ಲಿ, ೨೦೦೯ರಲ್ಲಿ ಗೋಣಿಕೊಪ್ಪ, ೨೦೧೧ರಲ್ಲಿ ಪುತ್ತೂರು ಹಾಗೂ ಬೆಂಗಳೂರು ಶೋರೂಮ್, ೨೦೧೮ರಲ್ಲಿ ಗೋಣಿಕೊಪ್ಪ ಶೋರೂಮ್ ಆರಂಭವಾಯಿತು. ಮುಳಿಯ ಬ್ರ್ಯಾಂಡ್ ನಿರ್ಮಾಣ ಮಾಡಿದ ಮೇಲೆ ಇದೀಗ ಪುನರ್‌ನವೀಕರಣದ ಸಂದರ್ಭದಲ್ಲಿದ್ದೇವೆ.೨೦೦೦ದಿಂದ ೨೦೦೮ರ ತನಕ ಇದ್ದ ಮುಳಿಯ ಕೇಶವ ಭಟ್ ಮತ್ತು ಸನ್ಸ್' ಬ್ರ್ಯಾಂಡ್ ೨೦೦೯ರಿಂದಮುಳಿಯ ಜ್ಯುವೆಲ್ಸ್’ ಎಂದಾಗಿ ಇಲ್ಲಿಯವರೆಗೆ ವ್ಯವಹಾರ ನಡೆಸಿಕೊಂಡು ಬಂದಿದ್ದೇವೆ.ಇತ್ತೀಚಿಗೆ ಗ್ರಾಹಕರಿಗೆ ವಜ್ರಾಭರಣಗಳ ಮೇಲೆ ಆಸಕ್ತಿ ಬಂದಿದೆ.ಚಿನ್ನದ ಧಾರಣೆ ಹೆಚ್ಚಾಗಿ ವಜ್ರ ಕೈಗೆಟಕುವ ಸಂದರ್ಭದಲ್ಲಿ ಮುಳಿಯ ಜ್ಯುವೆಲ್ಸ್' ಎಂಬ ಬ್ರ್ಯಾಂಡ್‌ನ್ನುಮುಳಿಯ ಗೋಲ್ಡ್ ಆಂಡ್ ಡೈಮಂಡ್’ ಎಂಬ ಹೊಸ ಹೆಸರಿನೊಂದಿಗೆ ಪರಿಚಯಿಸುತ್ತಿದ್ದೇವೆ.ಮುಳಿಯ ಲೋಗೋವನ್ನು ಈಗಿನ ಸಂದರ್ಭಕ್ಕೆ ಸರಿಯಾಗಿ ಪ್ರಸ್ತುತಪಡಿಸುತ್ತಿದ್ದೇವೆ.ಜೀವನ ಮಿನುಗಬೇಕೆಂಬ ಉದ್ದೇಶದಿಂದ ಲೋಗೋದಲ್ಲಿ ಮಿನುಗುವ ನಕ್ಷತ್ರ'ವನ್ನು ಅಳವಡಿಸಿದ್ದೇವೆ.ಈ ಮೂಲಕ ಗ್ರಾಹಕರಿಗೆ ಹೊಸತನವನ್ನು ಉಣಬಡಿಸಲಿದ್ದೇವೆ ಎಂದವರು ತಿಳಿಸಿದರು. ಶೋರೂಮ್ ಯೋಜನೆಗಳು: ಮಡಿಕೇರಿಯಲ್ಲಿ ಶೋರೂಮ್ ವಿಸ್ತೃತಗೊಂಡುಸಿಲ್ವರಿಯ ಬ್ರ್ಯಾಂಡ್’ ಶೋರೂಮ್ ಉದ್ಘಾಟನೆಗೊಳ್ಳಲಿದೆ.ಬೆಂಗಳೂರಿನಲ್ಲಿ ೨ ಸಾವಿರ ಚದರಡಿ ವಿಸ್ತೀರ್ಣ ಹೊಂದಿರುವ ಶೋರೂಮ್ ೪ ಸಾವಿರ ಚದರಡಿ ವಿಸ್ತೀರ್ಣಕ್ಕೆ ವಿಸ್ತೃತಗೊಳ್ಳಲಿದೆ.ಗೋಣಿಕೊಪ್ಪಲಿನಲ್ಲಿ ಹೊಸ ಜಾಗ ಖರೀದಿ ಮಾಡಿದ್ದು ಅದರಲ್ಲಿ ನೂತನ ಶೋರೂಮ್ ನಿರ್ಮಾಣವಾಗಲಿದೆ.ಬೆಳ್ತಂಗಡಿಯಲ್ಲಿ ಈಗ ಇರುವ ಶೋರೂಮ್‌ಗೆ ಇನ್ನೊಂದು ಮಹಡಿ ಸೇರಿಸಿಕೊಂಡು ಗ್ರಾಹಕರಿಗೆ ಸೇವೆ ನೀಡಲಿದ್ದೇವೆ ಎಂದು ಕೇಶವಪ್ರಸಾದ್ ಮುಳಿಯ ತಿಳಿಸಿದರು.
ಬ್ರ್ಯಾಂಡ್ ಅಂಬಾಸಿಡರ್:
ರಾಷ್ಟ್ರ ಹಾಗೂ ರಾಜ್ಯದಲ್ಲಿ ಗುರುತಿಸಿಕೊಳ್ಳಬೇಕಾದರೆ ಬ್ರ್ಯಾಂಡ್ ರಾಯಭಾರಿ ಹೊಂದಬೇಕಾಗಿದೆ.ಚಿತ್ರನಟ ರಮೇಶ್ ಅರವಿಂದ್ ಅವರನ್ನು ನಮ್ಮ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದೇವೆ.ಕರ್ನಾಟಕದಲ್ಲಿ ಶೋರೂಮ್ ವಿಸ್ತರಣೆ ಮಾಡಲು ರಮೇಶ್ ಅರವಿಂದ್‌ರವರು ಹೆಜ್ಜೆ ಹಾಕಲಿದ್ದಾರೆ.ವಿವಿಧ ಪಟ್ಟಣ, ನಗರಗಳಲ್ಲಿ ಶೋರೂಮ್ ಹೊಂದಲು ಯೋಜನೆ ಹಾಕಿದ್ದೇವೆ. ಇದಕ್ಕೆ ರಮೇಶ್ ಅರವಿಂದ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.ಏ.೨೦ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದರು.

ಮುಳಿಯದ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮಾತನಾಡಿ, ಮುಳಿಯ ಸಂಸ್ಥೆಯು ಪುತ್ತೂರಿಗೆ ಹೊಸತನ ಪರಿಚಯಿಸಲು ಮುಂಚೂಣಿಯಲ್ಲಿರುತ್ತದೆ.೨೦೧೧ರಲ್ಲಿ ಆರಂಭವಾದ ಶೋರೂಮ್ ಇನ್ನಷ್ಟು ವಿಸ್ತೃತಗೊಂಡು ಗ್ರಾಹಕರಿಗೆ ಪ್ರಸ್ತುತಪಡಿಸುತ್ತಿದ್ದೇವೆ.ನೂತನ ವಿಶಾಲವಾದ ಶೋರೂಮ್ ೪ ಮಹಡಿ ಹೊಂದಿದೆ.ಶೋರೂಮ್‌ಗೆ ಆಗಮಿಸುವ ಗ್ರಾಹಕರಿಗೆ ವ್ಯಾಲೆಟ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಈ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇವೆ.ಶೋರೂಮ್‌ನಲ್ಲಿ ಹೊಸ ಶೈಲಿಯ ಮಹಡಿ ನಿರ್ಮಿಸಿದ್ದೇವೆ.ಮಕ್ಕಳಿಗೆ ಆಟವಾಡುವ ಏರಿಯಾವನ್ನು ವಿಸ್ತರಣೆ ಮಾಡಿದ್ದೇವೆ.ಮಕ್ಕಳಿಗೆ ಎದೆಹಾಲು ನೀಡಲೆಂದು ಮಹಿಳೆಯರಿಗಾಗಿ ಪ್ರತ್ಯೇಕ ಕೋಣೆ ಇಡಲಾಗಿದೆ.ಪ್ರತೀ ಫ್ಲೋರ್‌ನಲ್ಲಿ ವೆಸ್ಟರ್ನ್ ಮತ್ತು ಇಂಡಿಯನ್ ಟಾಯ್ಲೆಟ್, ಗ್ರಾಹಕರಿಗೆ ರೆಸ್ಟ್‌ರೂಮ್ ವ್ಯವಸ್ಥೆ, ಅತಿಥಿ ದೇವೋಭವ ಎಂಬಂತೆ ಗ್ರಾಹಕರಿಗೆ ಮಧ್ಯಾಹ್ನ ಊಟ ಮತ್ತು ಸಂಜೆ ತಿಂಡಿಯ ವ್ಯವಸ್ಥೆ ಮಾಡಲಾಗಿದೆ.ಮಹಡಿ ಮೇಲೆ ೫೦೦ ಮಂದಿ ಭಾಗವಹಿಸುವ ರೂಫ್ ಗಾರ್ಡನ್ ಮಾಡಿದ್ದೇವೆ.ಬೆಳ್ಳಿ ಆಭರಣದ ಸಿಲ್ವರಿಯಾ ಹೊಸ ಸೆಕ್ಷನ್ ಮಾಡಲಾಗಿದೆ.ಡೈಮಂಡ್‌ನಲ್ಲಿ ಕಿಸ್ನ ಮತ್ತು ಅಮೂಲ್ಯ ಎರಡು ಬ್ರ್ಯಾಂಡ್‌ಗಳಿವೆ.ಮಳಿಗೆಯಲ್ಲಿ ವಾಚುಗಳು, ಪರ್ಫ್ಯೂಮ್, ಗಿಫ್ಟ್, ಪ್ರೀಮಿಯಂ ಲೈಫ್‌ಸ್ಟೈಲ್ ಐಟಂಗಳನ್ನು ಆರಂಭಿಸುವ ಯೋಜನೆಯಿದೆ ಎಂದರು.

ಮಳಿಗೆಯಲ್ಲಿ ಡೈಮಂಡ್ ಟೆಸ್ಟಿಂಗ್ ಮೆಷಿನ್ ಅಳವಡಿಸಲಾಗಿದೆ.ಗ್ರಾಹಕರಿಗೆ ನೈಜ ಡೈಮಂಡ್ ನೀಡಬೇಕೆಂಬ ಉದ್ದೇಶದಿಂದ ಮೆಷಿನ್ ಅಳವಡಿಸಿದ್ದೇವೆ.ಯಾವುದೇ ಕಳಪೆ ವಜ್ರ ಮಿಶ್ರಣಗೊಂಡಿಲ್ಲ ಎಂಬುದನ್ನು ಗ್ರಾಹಕರಿಗೆ ಈ ಯಂತ್ರದ ಮೂಲಕ ದೃಢೀಕರಿಸಲಾಗುತ್ತದೆ.ಭಾರತದಲ್ಲಿ ಪ್ರಥಮವಾಗಿ ಗ್ರಾಹಕರ ಸಮ್ಮುಖದಲ್ಲೇ ಟೆಸ್ಟಿಂಗ್ ಮಾಡಿ ಕೊಡುವ ಯೋಜನೆಯಾಗಿದೆ.ಹೈಯರ್ ಗ್ರೇಡ್ ಹೊಂದಿರುವ ಗೋಲ್ಡ್ ಟೆಸ್ಟಿಂಗ್ ಮೆಷಿನ್ ಕೂಡ ಅಳವಡಿಸಲಾಗಿದೆ ಎಂದರು.
ದೈವಾಭರಣಗಳ ಕೌಂಟರ್:
ಗ್ರಾಹಕರ ಬೇಡಿಕೆಯಂತೆ ದೈವಾಭರಣಗಳ ಕೌಂಟರ್ ಆರಂಭಿಸಿದ್ದೇವೆ.ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾರೆ.ಆದ್ದರಿಂದ ದೇವರಿಗೆ ನಾವು ಕೊಡಬೇಂಬ ಉದ್ದೇಶದಿಂದ ದೈವಾಭರಣಗಳನ್ನು ಯಾವುದೇ ಲಾಭಾಂಶ ಇಟ್ಟುಕೊಳ್ಳದೆ ತಯಾರಿಕೆ ವೆಚ್ಚದಲ್ಲೇ ನೀಡುತ್ತಿದ್ದೇವೆ.ದೇವಸ್ಥಾನ ಹಾಗೂ ದೈವಸ್ಥಾನವನ್ನು ಮೇಲ್ದರ್ಜೆಗೆ ಏರಿಸುವಾಗ ಅದರಲ್ಲಿ ನಮ್ಮದೊಂದು ಕಿರುಕಾಣಿಕೆ ಕೊಡುತ್ತಿದ್ದೇವೆ ಎಂದರು.

ಬ್ರ್ಯಾಂಡ್ ಪುನರ್‌ಜೀವನದ ಅವಶ್ಯಕತೆ
ಇವತ್ತು ಕರ್ನಾಟಕದ ಬ್ರ್ಯಾಂಡ್ ಆಗಿ ಮುಳಿಯ ಬೆಳೆದು ನಿಂತಿದೆ.ಬ್ರ್ಯಾಂಡ್ ಅಂದರೆ ಅದೊಂದು ವ್ಯಕ್ತಿತ್ವ.ಬ್ರ್ಯಾಂಡ್‌ನಿಂದ ಭಾವನೆ ಬರುತ್ತದೆ.ಪುತ್ತೂರಿನಲ್ಲಿ ೨೦೧೧ರಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಮಳಿಗೆ ನಿರ್ಮಿಸಿ ಗ್ರಾಹಕರಿಗೆ ಸಮರ್ಪಿಸಿದ್ದೇವೆ.ಚಿನ್ನ ಎಂದರೆ ಲಕ್ಷ್ಮಿ.ಹುಟ್ಟಿನಿಂದ ಸಾಯುವ ತನಕ ಮನುಷ್ಯನ ಜೀವನದಲ್ಲಿ ಚಿನ್ನದ ಅವಶ್ಯಕತೆ ಇದೆ.ಲಕ್ಷ್ಮಿಯ ದೇಗುಲ ಎಂದರೆ ಅದು ಬಂಗಾರದ ಅಂಗಡಿ.ದೇಗುಲಕ್ಕೆ ೧೨ ವರ್ಷಕ್ಕೊಮ್ಮೆ ಬ್ರಹ್ಮಕಲಶ ಮಾಡಬೇಕಾಗುತ್ತದೆ.ಬಂಗಾರದ ಅಂಗಡಿಗೂ ಬ್ರಹ್ಮಕಲಶ ಮಾಡುವ ಅಗತ್ಯ ಇರುತ್ತದೆ.ಅದೇರೀತಿ ಬ್ರ್ಯಾಂಡ್‌ಗೂ ನವೀಕರಣ ಬೇಕಾಗುತ್ತದೆ.ಈ ಅವಶ್ಯಕತೆಯನ್ನು ಮನಗಂಡು ಮುಳಿಯ ಬ್ರ್ಯಾಂಡ್‌ಗೆ ಪುನರ್‌ಜೀವನ ನೀಡಿ ಸಂಸ್ಥೆಯನ್ನು ಪುನರ್‌ನವೀಕರಣ ಮಾಡಿದ್ದೇವೆ ಎಂದು ಸಿಎಂಡಿ ಕೇಶವಪ್ರಸಾದ್ ಮುಳಿಯ ಹೇಳಿದರು.

ಬ್ರ್ಯಾಂಡ್ ಅಂಬಾಸಿಡರ್ ಚಲನಚಿತ್ರ ನಟ ರಮೇಶ್ ಅರವಿಂದ್‌ರವರಿಂದ ಉದ್ಘಾಟನೆ
ವಿಶಾಲವಾದ ಶೋರೂಮ್ ಏ.೨೦ರಂದು ಉದ್ಘಾಟನೆಗೊಳ್ಳಲಿದೆ.ಏ.೨೦ರಿಂದ ಮುಂದಿನ ೩೦ ದಿನಗಳವರೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.ಈ ಕಾರ್ಯಕ್ರಮಗಳಲ್ಲಿ ಶಾಸಕರು,ಮಂತ್ರಿಗಳು,ಲೋಕಸಭಾ ಸದಸ್ಯರು,ಸಾಹಿತಿಗಳು,ಉದ್ಯಮಿಗಳು ಭಾಗವಹಿಸಲಿದ್ದಾರೆ.ಬ್ರ್ಯಾಂಡ್ ರಾಯಭಾರಿ, ಚಲನಚಿತ್ರ ನಟ ರಮೇಶ್ ಅರವಿಂದ್ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಬೆಳಿಗ್ಗೆ ೯.೩೦ಕ್ಕೆ ಆಗಮಿಸಿ ಪ್ರಾರ್ಥನೆ ನೆರವೇರಿಸಿ ಬಳಿಕ ಬೈಕ್ ಮತ್ತು ತೆರೆದ ಜೀಪ್‌ನಲ್ಲಿ ದೀಪದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಶೋರೂಮ್ ಉದ್ಘಾಟಿಸಲಿದ್ದಾರೆ. ಏ.೨೮ರಂದು ಅಕ್ಷಯ ತೃತೀಯ ಇದೆ.ಧಾರ್ಮಿಕ ಹಿನ್ನೆಲೆ ಮತ್ತು ಮಹತ್ವ ಹೊಂದಿರುವ ಅಕ್ಷಯ ತೃತೀಯ ದಿನದಂದು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಕೇಶವಪ್ರಸಾದ್ ತಿಳಿಸಿದರು.

ಬ್ರ್ಯಾಂಡ್ ಮತ್ತು ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣುಶರ್ಮ, ಶಾಖಾ ಮ್ಯಾನೇಜರ್ ರಾಘವೇಂದ್ರ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *