
ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಸಮಿತಿ ರಚನೆ -ಅಧ್ಯಕ್ಷರಾಗಿ ಜಿನ್ನಪ್ಪ ಪೂಜಾರಿ ಆಯ್ಕೆಪುತ್ತೂರು: ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ನಿರ್ದೇಶನದನ್ವಯಪುತ್ತೂರಿನಾದ್ಯಂತ ಧರ್ಮಶಿಕ್ಷಣ ಜಾರಿಗೊಳಿಸುವ ಹಿನ್ನೆಲೆಯಲ್ಲಿಗ್ರಾಮಸಮಿತಿಗಳು ರೂಪುದಳೆಯುತ್ತಿದ್ದು, ಇದಕ್ಕೆಪೂರಕವಾಗಿ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಸಮಿತಿಯನ್ನು ಭಾನುವಾರರಚಿಸಲಾಯಿತು. ಬೆಳ್ಳಿಪ್ಪಾಡಿಯ ಸುಬ್ರಹ್ಮಣ್ಯ ಭಜನಾ ಮಂಡಳಿಕೇಂದ್ರಿತವಾಗಿ ಸಮಿತಿ ರಚಿಸಲಾಗಿದೆ. ಸ್ಥಳೀಯರಾದ ಜಿನ್ನಪ್ಪ ಪೂಜಾರಿಅಧ್ಯಕ್ಷರಾಗಿ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ್ ಗೌಡ ಡಿ.ವಿ.,ಉಪಾಧ್ಯಕ್ಷರಾಗಿ ಲಕ್ಷö್ಮಣ ಗೌಡ, ಕಾರ್ಯದರ್ಶಿಯಾಗಿ ರಾಮಣ್ಣ ಗೌಡ,ಜತೆ ಕಾರ್ಯದರ್ಶಿಯಾಗಿ ಮೋಹನ್ ಪಕಳ, ಸಂಚಾಲಕರಾಗಿ ವಸಂತಕೈಲಾಜೆ, ಖಜಾಂಚಿಯಾಗಿ ಚಂದನ್ ತೆಂಕಪಾಡಿ, ಉಪಾಧ್ಯಕ್ಷರಾಗಿ ಮಲ್ಲಿಕಾಅಳ್ವ ಹಾಗೂ ಸಂಧ್ಯಾ ರಾಮಚಂದ್ರ, ಜತೆ ಕಾರ್ಯದರ್ಶಿಯಾಗಿಕುಸುಮಾಧರ, ಸಂಘಟನ ಕಾರ್ಯದರ್ಶಿಯಾಗಿ ಗಣೇಶ್ಬಾರ್ತಿಹೊಲು ಆಯ್ಕೆಯಾದರು. ಪುತ್ತೂರು ಅಂಬಿಕಾ ಸಮೂಹಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಆಡಳಿತ ಮಂಡಳಿಸದಸ್ಯ ಬಾಲಕೃಷ್ಣ ಬೋರ್ಕರ್, ಮಾಧವ ಸ್ವಾಮಿ ಮತ್ತು ದಿನೇಶ್ಕುಮಾರ್ ಜೈನ್ ಹಾಗೂ ಬೆಳ್ಳಿಪ್ಪಾಡಿ ಭಾಗದ ಧರ್ಮ ಭಕ್ತರುಉಪಸ್ಥಿತರಿದ್ದರು.


