
ಉಡುಪಿ: ಇಲ್ಲಿನ ತೆಂಕಪೇಟೆಯ ಹೆಸರಾಂತ ಹೊಟೇಲ್ನ ಮಾಲೀಕ ನಾಪತ್ತೆಯಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಜಿತ್ ಕುಮಾರ್ ರವರು ಉಡುಪಿ ತೆಂಕಪೇಟೆಯಲ್ಲಿ ಶ್ರೀರಾಮ ಭವನ ಎಂಬ ಹೆಸರಿನ ಹೋಟೆಲ್ ವ್ಯವಹಾರವನ್ನು ನಡೆಸಿಕೊಂಡಿದ್ದು, ಏ12 ರಂದು ಸಂಜೆ 3:45 ಗಂಟೆಗೆ ತಿಂಡಿಯನ್ನು ಪಾರ್ಸೆಲ್ ಕೊಡಲು ಅವರ ಆಕ್ಟೀವ ಹೋಂಡಾ ಸ್ಕೂಟರ್ ನಲ್ಲಿ ಹೋದವರು ಹೋಟೆಲ್ ಗೆ ವಾಪಸ್ಸು ಬಾರದೇ ಇದ್ದಾಗ ಪತ್ನಿ ಮೊಬೈಲ್ ಗೆ ಕರೆಮಾಡಿದಾಗ ನಂಬರ್ ಸ್ವಿಚ್ ಆಫ್ ಬರುತ್ತಿದ್ದು, ನಂತರ ಸಂಬಂಧಿಕರೊಂದಿಗೆ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದಾಗ ಸಿಕ್ಕಿರುವುದಿಲ್ಲ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 62/2025 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ


