ಮಂಗಳೂರು : ಕರಾವಳಿಯ ದೈವರಾಧನೆಯನ್ನು ಶಾಲಾ ರಂಗೋತ್ಸವ ಕಾರ್ಯಕ್ರಮಕ್ಕೆ ಸೇರಿಸಿದ ರಾಜ್ಯ ಸರ್ಕಾರ,ಸುತ್ತೋಲೆಯನ್ನು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ದೈವರಾಧಕರು..!

ಮಂಗಳೂರು : ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದಂತಹ ಕರಾವಳಿಯ ದೈವರಾಧನೆಯನ್ನು ರಾಜ್ಯ ಸರ್ಕಾರ ಶಾಲಾ ರಂಗೋತ್ಸವ ಕಾರ್ಯಕ್ರಮದಲ್ಲಿ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ದೈವಾರಾಧನೆ ಒಂದು ಪ್ರಕೃತಿ ಆರಾಧನಾ ಪದ್ಧತಿ , ಹರಿಯುವ ನದಿಯಿಂದ ತೆಗೆದ ಕಲ್ಲನ್ನು ಪೂಜಿಸಿದವರು ನಮ್ಮ ಈ ತುಳುವರು , ಇದನ್ನ ಬನಗಳ ನಡುವೆ ಇಟ್ಟು ಹರಿಯುವ ಝರಿಯ ನೀರನ್ನ ಉಪಯೋಗಿಸಿ ಕಾಡಿನಲ್ಲಿ ಸಿಗುವ ಹೂ ಇತ್ಯಾದಿಗಳನ್ನು ಬಳಸಿದವರು ಇವರು , ನಮ್ಮಲ್ಲಿ ದೈವಗಳಿಗೆ ಉಗಮ ಅಂತ್ಯ ಎಂಬ ಕಲ್ಪನೆಗಳು ಇದ್ದಿಲ್ಲ, ನಿರಾಕಾರವಾದ ಕಲ್ಲುಗಳಲ್ಲಿ ದೈವಗಳನ್ನು ನಂಬಿದವರು ಎಂಬುದು ಇತಿಹಾಸ. ದೈವಾರಾಧನೆಯು ಒಂದು ಪವಿತ್ರ ಆಚರಣೆಯಾಗಿದ್ದು, ಮನರಂಜನಾ ಕಾರ್ಯಕ್ರಮವಲ್ಲ ಎಂದು ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೀಗ ಸರಕಾರದ ವಿರುದ್ಧ ತುಳುನಾಡಿನ ಜನರು ರೊಚ್ಚಿಗೆದ್ದಿದ್ದು ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಲಾಗಿದೆ.

News Editor

Learn More →

Leave a Reply

Your email address will not be published. Required fields are marked *