
ಕೋಟೆಕಾರು ಪಟ್ಟಣ ಪಂಚಾಯತ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು ಇಲ್ಲಿನ ಎನ್ ಎಸ್ ಎಸ್ ವಿಧ್ಯಾರ್ಥಿಗಳು ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ 7 ರ ಪ್ರವಾಸಿ ಮಂದಿರ ರಸ್ತೆ ಮತ್ತು ಆರೋಗ್ಯ ಕೇಂದ್ರ ರಸ್ತೆಯಲ್ಲಿ ಸ್ವಚ್ಚತಾ ಶ್ರಮದಾನವನ್ನು ಮಾಡಲಾಯಿತು.ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾ ಶ್ರೀ ಉದಯ ಕುಮಾರ ಶೆಟ್ಟಿ, ಆರೋಗ್ಯ ನೀರಿಕ್ಷಕರಾದ ವಿಕ್ರಮ್, ಎನ್ ಎಸ್ ಎಸ್ ಸಂಯೋಜಕಿ ಶ್ರೀ ಮತಿ ಮಮತಾ , ಉಪನ್ಯಾಸಕರಾದ ಶ್ರೀ ಮಂಜುನಾಥ , ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದರು.








