
“ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ಆರು ಅಕಾಡೆಮಿಗಳು, ಹಲವು ಜಿಲ್ಲೆಗಳ ಆಡಳಿತ ಜತೆಯಾಗಿ ಏರ್ಪಡಿಸಿದ್ದ ಬಹುಸಂಸ್ಕೃತಿ ಉತ್ಸವಕ್ಕೆ ಹಾಜರಾಗಲು ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅದನ್ನು ಬದಿಗೊತ್ತಿ ಮಾವನ ಮನೆಗೆ ಊಟಕ್ಕೆ ಬಂದಂತೆ ಎಂಎಲ್‌ಸಿಯೊಬ್ಬರು ಏರ್ಪಡಿಸಿದ್ದ ಮಧ್ಯಾಹ್ನದ ಬಾಡೂಟಕ್ಕೆ ತೆರಳಿದ್ದರು. ಅಲ್ಲಿ ಭೂರೀ ಭೋಜನದ ಬಳಿಕ ವಿಶ್ರಾಂತಿ ಪಡೆದು ನಂತರ ಸ್ಪೀಕರ್ ಸಾಹೇಬರ ಬಾವುಟಗುಡ್ಡೆ ಚಹಾ ಕುಡಿಯಲು ತೆರಳಿದರು.
ಇತ್ತ ಹಲವು ತಿಂಗಳ ತಯಾರಿ, ಉತ್ಸುಕತೆ, ಪರಿಶ್ರಮದಿಂದ ಹಮ್ಮಿಕೊಂಡಿದ್ದ ಬಹುಸಂಸ್ಕೃತಿ ಉತ್ಸವ ಘನ ಮುಖ್ಯಮಂತ್ರಿಯವರ ಆಗಮನದಿಂದ ವಂಚಿತವಾಯಿತು. ನೆರೆದಿದ್ದ ಜನರು, ವಿದ್ಯಾರ್ಥಿಗಳು, ಭಾಗವಹಿಸಿದ್ದ ನೂರಾರು ಕಲಾವಿದರು ಮತ್ತು ಸಂಘಟಕರು ತೀವ್ರ ನಿರಾಶೆಗೊಂಡರು. ಸಿಎಂ ಬರುತ್ತಾರೆ ಎಂದು ಕುಳಿತು ಗಂಟೆಗಟ್ಟಲೆ ಕಾದಿದ್ದ ಪತ್ರಕರ್ತರು ಆಕ್ರೋಶದಿಂದ ಹಿಡಿಶಾಪ ಹಾಕುತ್ತಾ ನಿರ್ಗಮಿಸಿದರು.
ಮಂಗಳೂರಿನ ಜನರಿಗೆ ಮಾತ್ರವಲ್ಲ, ಭಾಗವಹಿಸಿದ ಭಾಷಾ, ಸಂಸ್ಕೃತಿಗಳ ಜನ ಸಮುದಾಯಗಳಿಗೆ ಅವಮಾನಿಸಿದ್ದಾರೆ. ದೂರದ ಊರುಗಳಿಂದ ಬಂದಿದ್ದ ಪ್ರತಿಭೆಗಳಿಗೆ ತಣ್ಣೀರೆರಚಿದ್ದಾರೆ. ಅವರ ನಡೆ ಅಕ್ಷಮ್ಯ. ಇಡೀ ದಿನ ಅದ್ಭುತ ಪ್ರದರ್ಶನ ನೀಡಿದ ಕಲಾ ತಂಡಗಳಿಗೂ ತಣ್ಣೀರೆರಚಿದಂತಾಗಿದೆ.
. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ಇನ್ನೆಂದೂ ಗೆಲ್ಲಬಾರದೆಂಬ ಹವಣಿಕೆಯಲ್ಲಿ ಕಾಂಗ್ರೆಸ್ ಮುಖಂಡರು ಇದ್ದಂತಿದೆ.
ಇ ನಡವಳಿಕೆಯಿಂದಾಗಿ ಸಿಎಂ ಸ್ಥಾನದ ಘನತೆಗೆ ಸಿದ್ಧರಾಮಯ್ಯನವರು ಮಸಿ ಬಳಿದಿದ್ದಾರೆ. ಇದು ತೀರಾ ಖಂಡನೀಯ ಮತ್ತು ಅಕ್ಷಮ್ಯ.


