
ಕೋಟೇಕಾರ್ ಬ್ಯಾಂಕ್ ದರೋಡೆ ಪೂರ್ವ ಯೋಜಿತ ಕೃತ್ಯವೇ?!
ಬ್ಯಾಂಕ್ ಸಿಬ್ಬಂದಿಗಳ ಮಾತಿಗೂ, ಕೃತ್ಯ ನೋಡಿದ ವಿದ್ಯಾರ್ಥಿಗಳ ಮಾತಿಗೂ ವ್ಯತ್ಯಾಸ?
ಬ್ಯಾಂಕ್ ಸಿಬ್ಬಂದಿಗಳು ಹೇಳುತ್ತಾರೆ ಅವರು ಅಚ್ಚ ಹಿಂದಿಯಲ್ಲಿ ಮಾತನಾಡುತ್ತಿದ್ದರು ಲೋಕಲ್ ಅಲ್ಲ ಎಂದು. ಆದರೆ ದರೋಡೆಯ ಶಬ್ದ ಕೇಳಿ ಕೆಳಗಿನ ಅಂಗಡಿಯಿಂದ ಓಡಿ ಬಂದ ಶಾಲಾ ಮಕ್ಕಳ ಪ್ರಕಾರ ಅವರು ಕನ್ನಡದಲ್ಲಿ ಲೋಕಲ್ ನವರ ತರಹ ಮಾತನಾಡುತ್ತಿದ್ದರು.
ಅದೇ ತರಹ ಇನ್ನು ಹಲವು ಸಂಶಯಗಳು ಸ್ಥಳೀಯರಿಗೆ ಇದೆ.
- ಇದೇ ಕೆ.ಸಿ ರೋಡ್ ನಲ್ಲಿ 5 ವರ್ಷಗಳ ಮುಂಚೆ ಇವರದೇ ಬ್ಯಾಂಕ್ ನಲ್ಲಿ ಇದೇ ತರಹ ದರೋಡೆ ನಡೆದಿತ್ತು. ಇವರದೇ ಬ್ಯಾಂಕ್ ನಲ್ಲಿ ಯಾಕೆ ದರೋಡೆ ನಡೆಯುವುದು?
- ಇದಕ್ಕಿಂತ ಮೊದಲು ದರೋಡೆ ನಡೆದಿದ್ದರೂ ಸಹ ಇಷ್ಟರ ತನಕ ವಾಚ್ ಮ್ಯಾನ್ ಇಟ್ಟಿಲ್ಲ.
- ಇವತ್ತೇ CC ಕ್ಯಾಮೆರಾ ರಿಪೇರಿ ಮಾಡಲು ಟೆಕ್ನೀಷಿಯನ್ ಕರೆದದ್ದು. ಅವರು ರಿಪೇರಿಗಾಗಿ ಕನೆಕ್ಷನ್ ಕಟ್ ಮಾಡಿದ ಕಾರಣ CC ಕ್ಯಾಮೆರಾ ಯಾವುದೂ ಕೆಲಸ ಮಾಡುತ್ತಿರಲಿಲ್ಲ.
- ಇಲ್ಲಿ ಹೆಚ್ಚು ಜನ ಸೇರುವ ಜಾಗ. ಹಲವು ಅಂಗಡಿಗಳು ಇದೆ. ಮುಸ್ಲಿಮರು ಹೆಚ್ಚು ಇರುವ ಜಾಗ.
ಶುಕ್ರವಾರ ಮುಸ್ಲಿಮರು ಜುಮಾ ನಮಾಝ್ ಹೋಗುವ ಸಮಯ ನೋಡಿಯೇ ಅದೂ ಸರಿಯಾಗಿ ಅವರು ನಮಾಝ್ ಮಾಡುವ ಸಮಯ ಅಂದರೆ 95-98% ಮುಸ್ಲಿಮರು ಮಸೀದಿಯಲ್ಲಿ ಇರುವ ಸಮಯ 1:10 ರಿಂದ 1:20 ರ ನಡುವೆ. ಈ ಸಮಯ ಗೊತ್ತಿರುವುದು ಅಲ್ಲಿ ಹಲವು ವರ್ಷಗಳಿಂದ ವಾಸವಿರುವವರಿಗೆ ಮಾತ್ರ. ಯಾಕೆಂದರೆ ಮಂಗಳೂರು ಬಿಟ್ಟು ಬೇರೆ ಸ್ಥಳಗಳಲ್ಲಿ ಜುಮಾ ನಮಾಝ್ ಸಮಯ ಸ್ವಲ್ಪ ಚೇಂಜ್ ಇದೆ. - ಇನ್ನೊಂದು ಮುಖ್ಯವಾದ ಕಾರಣ ಕೇವಲ 5 ನಿಮಿಷದಲ್ಲಿ ಈ ದರೋಡೆ ನಡೆದದ್ದು.
ನಿಜವಾಗಿಯೂ ಇದೆಲ್ಲಾ 5 ನಿಮಿಷದಲ್ಲಿ ನಡೆದದ್ದು ಎಂದು ಹೇಳುವಾಗಲೇ ಸಂಶಯ. ಯಾಕೆಂದರೆ ಕೆಳಗಿನಿಂದ ಮೇಲಕ್ಕೆ ಹೋಗಲು ಕನಿಷ್ಠ ಒಂದು ನಿಮಿಷ ಬೇಕು. ಬ್ಯಾಂಕ್ ಗೆ ಹೋಗಿ ಡೋರ್ ಬಂದ್ ಮಾಡಿ ಸಿಬ್ಬಂದಿಗಳನ್ನು ಹೆದರಿಸಿ, ಅವರನ್ನು ಒಂದು ಜಾಗದಲ್ಲಿ ನಿಲ್ಲಿಸಿ, ಮ್ಯಾನೇಜರ್ ನ ಕೈಯಿಂದ ಕೀ ತೆಗೆದು ಲೋಕರ್ ಓಪನ್ ಮಾಡಿ ಗೋಲ್ಡ್ ಗಳನ್ನು ಚೀಲಕ್ಕೆ ತುಂಬಿ ಮತ್ತೆ ಕೆಳಗೆ ಓಡಿ ಹೋಗಲು 5 ನಿಮಿಷದಲ್ಲಿ ಸಾಧ್ಯವೇ?
ಲೋಕರ್ ಓಪನ್ ಮಾಡಲೇ ಒಂದು ನಿಮಿಷ ಬೇಕು.
ಈ ತರಹ ಹಲವಾರು ಪ್ರಶ್ನೆಗಳು ಜನರ ಮುಂದೆ ಇದೆ.
ಈಗ ನಮ್ಮ ಕಣ್ಣಿಗೆ ಕಾಣುವಂತದ್ದು ಬಂದವರಿಗೆ ಬ್ಯಾಂಕ್ ನ ಬಗ್ಗೆ ಎಲ್ಲಾ ಮಾಹಿತಿ ಇದೆ. ಹಲವು ಬಾರಿ ಬ್ಯಾಂಕ್ ಗೆ ಬಂದಿದ್ದಾರೆ. ಮಾತ್ರವಲ್ಲ ಸ್ಥಳೀಯವಾಗಿ ಎಲ್ಲಾ ಹಾಗು ಹೋಗುಗಳು ಅವರಿಗೆ ತಿಳಿದಿದೆ. ಅದೇ ತರಹ ಬ್ಯಾಂಕ್ ನ ಒಳಗಿನವರ ಸಹಾಯ ಅಥವಾ ಸಹಕಾರ ಇಲ್ಲದೇ ಇದೆಲ್ಲ ನಡೆಯಲು ಕಂಡಿತಾ ಸಾಧ್ಯವಿಲ್ಲ.
ಇದರ ಹಿಂದೆ ಯಾರದೆಲ್ಲಾ ಕೈವಾಡ ಇದೆ ಎಂದು ಕಂಡಿತಾ ಪೋಲೀಸ್ ತನಿಖೆಯಲ್ಲಿ ಹೊರಬೀಳಲಿದೆ ಎಂದು ಆಶಿಸುವ.


