ಹೆಬ್ರಿ ತಾಲುಕಿನ ಮುದ್ರಾಡಿ : ಭಾರಿ ಮಳೆಯಿಂದಾಗಿ ಭಾರಿ ಹಾನಿ : ನೀರಿನಲ್ಲಿ ಕೊಚ್ಚಿ ಹೋದ ಕಾರು.

ಮುದ್ರಾಡಿ : ಮೇಘ ಸ್ಪೋಟ : ಭಾರಿ ಹಾನಿ : ನೀರಿನಲ್ಲಿ ಕೊಚ್ಚಿ ಹೋದ ಕಾರು.



ಮುದ್ರಾಡಿಯಲ್ಲಿ ಭಾನುವಾರ ಮಧ್ಯಾಹ್ನ 2.30 ರಿಂದ 3.45 ವರೆಗೆ ಸುರಿದ ಭಾರಿ ಮಳೆಯಿಂದಾಗಿ ಭಾರಿ ಹಾನಿಯಾಗಿದೆ. ಮುದ್ರಾಡಿಯ ಹೊಸ ಕಂಬ್ಲದಲ್ಲಿ 1, ಕಾಂತರಬೈಲಿನಲ್ಲಿ 4, ಕೆಲಕಿಲದಲ್ಲಿ 3ಮನೆಗಳು ಅರ್ಧದಷ್ಟು ಜಲಾವೃತ್ತಗೊಂಡಿದೆ.

ಮನೆಮಂದಿಯನ್ನು ಹಗ್ಗಕಟ್ಟಿ ಏಣಿಯ ಸಹಾಯದಿಂದ ಹೊರ ಕರೆತರಲಾಗಿದೆ. ಭಾರೀ ಮಿಂಚು ಸಿಡಿಲು ಸಹಿತ ಮಳೆಯಾಗಿದೆ. 2 ಕಾರುಗಳು ಮತ್ತು ಬೈಕ್‌ ಗಳು ಒಂದೇ ಸವನೆ ನುಗ್ಗಿದ ನೀರಿನಲ್ಲಿ ಕೊಚ್ಚಿ ಹೋಗಿವೆ. ಯಾವೂದೇ ಪ್ರಾಣಾಹಾನಿಯಾಗಿಲ್ಲ. ಕಬ್ಬಿನಾಲೆಯ ಬೆಟ್ಟದಲ್ಲಿ ಮೇಘಸ್ಫೋಟದಿಂದ ಈ ರೀತಿಯಾಗಿದೆ. ಒಂದೇ ಸವನೆ ನೀರು ನುಗ್ಗಿ ಬಂದಿದೆ ಎಂದು ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಮುದ್ರಾಡಿ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅದ್ಯಕ್ಷೆ ವಸಂತಿ ಪೂಜಾರಿ, ಪಂಚಾಯತಿ ಸದಸ್ಯರು, ಗ್ರಾಮ ಆಡಳಿತಾಧಿಕಾರಿ ನವೀನ್‌ ಕುಮಾರ್‌ ಕುಕ್ಕುಜೆ ಸ್ಥಳದಲ್ಲಿದ್ದಾರೆ. ಅಪಾರ ಹಾನಿ ಸಂಭವಿಸಿದೆ. ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್‌ ಆಗಿದ್ದು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ. ಒಂದು ದನ ಹಟ್ಟಿಯೂ ಬಿದ್ದಿದೆ

News Editor

Learn More →

Leave a Reply

Your email address will not be published. Required fields are marked *