ಸರಕಾರಿ ಪ್ರೌಢಶಾಲೆ ಕಡಂಬಾರ್ ಇಲ್ಲಿನ 2024- 25ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಸ್ಪೋರ್ಟ್ಸ್ ಮೀಟ್ ಮದರ್ ಇಂಡಿಯಾ ಗ್ರೌಂಡ್ ನಲ್ಲಿ ನಡೆಯಿತು.

ಮಂಜೇಶ್ವರ:ಸರಕಾರಿ ಪ್ರೌಢಶಾಲೆ ಕಡಂಬಾರ್ ಇಲ್ಲಿನ 2024- 25ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಸ್ಪೋರ್ಟ್ಸ್ ಮೀಟ್ ಎರಡು ದಿವಸ ಮದರ್ ಇಂಡಿಯಾ ಗ್ರೌಂಡ್ ನಲ್ಲಿ ನಡೆಯಿತು.ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೋಯಿದೀನ್ ಅವರು ವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನಿತಾ ಕೆ.ಬಿ ಅವರು ಪ್ರಾಸ್ತವಿಕ ನುಡಿಗಳಾನ್ನಾಡಿದರು.ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನಡೆಸಿದ ಕಾಸರಗೋಡ್ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಕಮಲಾಕ್ಷಿ ಅವರು ಒಂದು ವ್ಯಕ್ತಿಯ ಮಾನಸಿಕ ಶಾರೀರಿಕ ಬೌದ್ಧಿಕ ಬೆಳವಣಿಗೆಗೆ ಸ್ಪೋರ್ಟ್ಸ್ ಅತಿ ಮುಖ್ಯವಾದ ಭಾಗವಾಗಿದೆ ಎಂದು ತಿಳಿಸಿದರು. ಶಾಲಾ ಸೀನಿಯರ್ ಅಸಿಸ್ಟೆಂಟ್ ಆದ ಗೋಪಿ ಟೀಚರ್ ಸಹನಾಜ್ ಟೀಚರ್,ಎಸ್ಎಂಸಿ ಚೇರ್ಮನ್ ಶ್ರೀ ಪ್ರದೀಪ್ ಕುಮಾರ್ ಶುಭವನ್ನು ಹಾರೈಸಿದರು.ಬಳಿಕ ವಿದ್ಯಾರ್ಥಿಗಳ ಆಕರ್ಷಕವಾದ ಪಥಸಂಚಲನ ನಡೆಯಿತು.ಮಂಜೇಶ್ವರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದ ಶ್ರೀ ಸಲೀಂ ಸರ್ ಗಾರ್ಡ್ ಆಫ್ ಹೋನರ್ ಸ್ವೀಕರಿಸಿದರು.ಶಾಲಾ ಸ್ಟಾಫ್ ಸೆಕ್ರೆಟರಿ ಅಬೊಕರ್ ಸರ್ ಅತಿಥಿಗಳನ್ನು ಸ್ವಾಗತಿಸಿದರು.ಸ್ಪೋರ್ಟ್ಸ್ ಕನ್ವೀನರ್ ಆದ ರಾಜೇಶ್ ಕೊಡ್ಲಮೊಗರು ಧನ್ಯವಾದಗಳನ್ನು ಸಮರ್ಪಿಸಿದರು.


ಶಾಲಾ ಸ್ಪೋರ್ಟ್ಸ್ ನಡೆಯುವ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಆದ ಶ್ರೀ ದಿನೇಶ್ ಸರ್ ಹಾಗೂ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾದ ಶ್ರೀ ರಾಜಗೋಪಾಲ್ ಸರ್ ಹಾಗೂ ಮಂಜೇಶ್ವರ ಬ್ಲಾಕ್ ಪ್ರೋಗ್ರಾಮ್ ಕೋಆರ್ಡಿನೇಟರ್ ಆದ ಶ್ರೀ ಜಾಯ್ ಸರ್ ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಶಾಲಾ ನಾಯಕಿಯಾದ ಶಹಮ ಕ್ರೀಡಾ ಪ್ರತಿಜ್ಞೆಯನ್ನು ವಾಚಿಸಿದರು.

News Editor

Learn More →

Leave a Reply

Your email address will not be published. Required fields are marked *