ಪುತ್ತೂರು ಬಿಜೆಪಿ ಯುವ ಮೋರ್ಚಾದಿಂದ ವಿಧಾನಪರಿಷತ್‌ ಸದಸ್ಯ ಐವನ್ ಡಿ ಸೋಜ ವಿರುದ್ಧ ಪ್ರಕರಣ ದಾಖಲಿಸುವಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು.

ಪುತ್ತೂರು ಬಿಜೆಪಿ ಯುವ ಮೋರ್ಚಾದಿಂದ ವಿಧಾನಪರಿಷತ್‌ ಸದಸ್ಯ ಐವನ್ ಡಿ ಸೋಜ ವಿರುದ್ಧ ಪ್ರಕರಣ ದಾಖಲಿಸುವಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು.

ಪುತ್ತೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ

ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಒಪ್ಪಿಗೆ ನೀಡಿದ ರಾಜ್ಯಪಾಲರ ನಡೆಯ ವಿರುದ್ಧ ವಿಧಾನಪರಿಷತ್‌ ಸದಸ್ಯ ಐವನ್ ಡಿಸೋಜಾ ನೀಡಿರುವ ಹೇಳಿಕೆಯನ್ನು ಖಂಡಿಸಿ ಪುತ್ತೂರು ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರ ಠಾಣೆಗೆ ದೂರು ನೀಡಲಾಯಿತು.

ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತು ಪ್ರಮುಖರು ಪುತ್ತೂರು ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸತೀಶ್ ಜಿ ಜೆ ಅವರಿಗೆ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ರಾಜ್ಯಪಾಲರು ಒಪ್ಪಿಗೆ ನೀಡಿದ ಪ್ರಾಸಿಕ್ಯೂಷನ್ ಹಿಂತೆಗೆದುಕೊಳ್ಳಬೇಕು ಅಥವಾ
ಇಲ್ಲಿಂದ ವಾಪಾಸು ಹೋಗಬೇಕು. ಇಲ್ಲದಿದ್ದರೆ ಬಾಂಗ್ಲಾ ದೇಶದ ಪ್ರಧಾನಿಗೆ ಆದ ಗತಿ ಬರಲಿದೆ ಎಂದು ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಎಲ್ಲಾ ಕಡೆಗಳಲ್ಲಿ ಹೋರಾಟ ನಡೆಯುತ್ತಿದೆ.

ಪುತ್ತೂರಿನ ಯುವಮೋರ್ಚಾ
ತೀವ್ರವಾಗಿ ಖಂಡಿಸುತ್ತಿದ್ದು, ಈ ಕುರಿತು ಐವನ್ ಡಿ’ಸೋಜಾ
ಅವರ ವಿರುದ್ಧ ದೂರು ನೀಡುತ್ತಿದ್ದೇವೆ. ಅದನ್ನು ಸ್ವೀಕರಿಸಿ
ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು
ಒತ್ತಾಯಿಸಿದರು.

ಯುವಮೋರ್ಚಾ ಅಧ್ಯಕ್ಷ ಶಿಶಿರ್‌ ಪೆರ್ವೋಡಿ, ಉಪಾಧ್ಯಕ್ಷ ಆದೇಶ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಭಟ್, ಹಿರಿಯ ಬಿಜೆಪಿ ಮುಖಂಡ ಸುರೇಶ್ ಆಳ್ವ,ಅನಿಲ್ ತೆಂಕಿಲ, ಉಮೇಶ್‌ ಕೋಡಿಬೈಲು, ರಾಜೇಶ್ ರೈ ಪರ್ಪುಂಜ, ಪುರುಷೋತ್ತಮ ಮುಂಗ್ಲಿಮನೆ, ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು,ಸತೀಶ್ ನಾಯ್ಕ್ ಪರ್ಲಡ್ಕ,ಹರಿಪ್ರಸಾದ್ ಯಾದವ್, ನಾಗೇಶ್ ಪ್ರಭು, ನಿತೇಶ್ ಶಾಂತಿವನ., ಜಯಶ್ರೀ ಶೆಟ್ಟಿ, ದಿವ್ಯಾ ಪುರುಷೋತ್ತಮ, ವಿಶ್ವನಾಥ ಕುಲಾಲ್, ಹರೀಶ್ ಬಿಜತ್ರೆ, ರತನ್ ರೈ ಕುಂಬ್ರ, ಶಿವಕುಮಾ‌ರ್ ಕಲ್ಲಿಮಾರ್ ಸಹಿತ ಹಲವಾರು ಮಂದಿ ಮುಖಂಡರು ಉಪಸ್ಥಿತರಿದ್ದರು

News Editor

Learn More →

Leave a Reply

Your email address will not be published. Required fields are marked *