ಬೆಳ್ತಂಗಡಿ: ನಾಲ್ಕು ದಿನದ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದ ಕಾಲೇಜು ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ: ಇಲಿ ಪಾಷಣ ಸೇವಿಸಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಬಳಿ ನಡೆದಿದೆ. ಪುದುವೆಟ್ಟು ಗ್ರಾಮದ ಕಲ್ಲಾಜೆ ನಿವಾಸಿ ವೆಂಕಟೇಶ್ ಅವರ ಪುತ್ರಿ ಅನಿತಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ.

ಈಕೆ ನಾಲ್ಕು ದಿನದ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದಳು ತೀವ್ರ ಅಸ್ವಸ್ಥಗೊಂಡಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 3 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅನಿತಾ ಜು.3ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಈಕೆ ಪ್ರಸ್ತುತ ಬೆಳ್ತಂಗಡಿಯ ಖಾಸಗಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದು ಮನೆಯವರಿಗೆ ಕಷ್ಟ ಕೊಡಲು ನನ್ನಿಂದ ಆಗಲ್ಲ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!