
ಪುತ್ತೂರಿನಲ್ಲಿ ಧರೆ ಕುಸಿದ ಸ್ಥಳಗಳಿಗೆ ಜಿಲ್ಲಾಧಿಕಾರಿ ಭೇಟಿ.
ಪುತ್ತೂರು:ಮಳೆಯಿಂದಾಗಿ ಪುತ್ತೂರಿನ ಕೆಲವು ಕಡೆ ಅಪಾಯಕಾರಿಯಾಗಿ ಧರೆ ಕುಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿದರು.

ಬೀರಮಲೆ, ಬಪ್ಪಳಿಗೆ ಸಿಂಗಾಣಿ ಭಾಗಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ ಅವರಿಂದ ಮಾಹಿತಿ ಪಡೆದು ಕೊಂಡರು.

ಇದೆ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ನಗರಸಭೆಯ ಮುಖ್ಯಧಿಕಾರಿ ಮಧು ಎಸ್ ಮನೋಹರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹನಾಧಿಕಾರಿ ನವೀನ್ ಭಂಡಾರಿ, ಕಂದಾಯ ಇಲಾಖೆಯ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.












