

ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿರುವ ಶಕ್ತಿಶಾಲಿ ಭಾರತ ನಿರ್ಮಾಣದ ಸಂಕಲ್ಪಕ್ಕೆ ಬಲ ತುಂಬುವ ಸಲುವಾಗಿ ಮತ್ತೊಮ್ಮೆ ಮೋದಿ ಎಂಬ ಘೋಷಣೆಯ ಯುವ ಚೈತನ್ಯ ದೊಂದಿಗೆ ಮೋದಿ ಬ್ರಿಗೇಡ್ ಉದ್ಘಾಟನಾ ಕಾರ್ಯಕ್ರಮವು ಜನವರಿ 21ರಂದು ಟಿ.ವಿ ರಮಣ ಪೈ ಕನ್ವೆನ್ಷನ್ ಸೆಂಟರ್ ನವ ಭಾರತ್ ಸರ್ಕಲ್ ಮಂಗಳೂರು ಇಲ್ಲಿ ನಡೆಯಲಿದೆ ಎಂದು ಮೋದಿ ಬ್ರಿಗೇಡ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರವಿ ಕಾವೂರು.
ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಬ್ರಿಗೇಡ್ ಉದ್ಘಾಟನೆಯನ್ನು ಮಂಗಳೂರಿನಲ್ಲಿ ಜನವರಿ 21ರಂದು ಬೆಳಿಗ್ಗೆ 10.30 ಕ್ಕೆ ಟಿ.ವಿ ರಮಣ ಪೈ ಕನ್ವೆನ್ಷನ್ ಹಾಲ್ ನಲ್ಲಿ ನಡೆಸಲಿದ್ದು ಕಾರ್ಯಕ್ರಮವನ್ನು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಕನ್ಯಾಡಿ ಮಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಗೌರಿಗದ್ದೆ ಆಶ್ರಮ ಅವಧೂತ ವಿನಯ್ ಗುರೂಜಿ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ರಾಷ್ಟ್ರೀಯವಾದಿ ಹಾಗೂ ನ್ಯಾಯವಾದಿ ಮೀರಾ ರಾಘವೇಂದ್ರ ಅವರು ಆಗಮಿಸಲಿದ್ದಾರೆ ಎಂದ ಅವರು, ಮೋದಿ ಅವರ ಮೇಲಿನ ಅಭಿಮಾನ ಮತ್ತು ನಮ್ಮ ದೇಶಕ್ಕೆ ಪ್ರಧಾನಮಂತ್ರಿ ಅವರು ನೀಡಿದ ಜನಪರ ಕಾಳಜಿ ಕಾರ್ಯಕ್ರಮವನ್ನು ಮನದಟ್ಟು ಮಾಡಿಕೊಂಡು ಸಂಸ್ಥೆಯ ಸದಸ್ಯರೆಲ್ಲ ಸೇರಿಕೊಂಡು ಅಧ್ಯಕ್ಷರುಗಳ ಸಹಕಾರದೊಂದಿಗೆ ಬ್ರಿಗೇಡ್ ಸಂಸ್ಥೆಯನ್ನು ಆರಂಭಿಸಲಾಗಿದೆ. ಕಾರ್ಯಕ್ರಮಕ್ಕೆ ದೇಶದ ಪ್ರತಿಯೊಬ್ಬ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರನ್ನು ಆಹ್ವಾನಿಸುತಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೋದಿ ಬ್ರಿಗೇಡ್ ಗೌರವಾಧ್ಯಕ್ಷ ದಿನೇಶ್ ಕೆ ಉರ್ವ, ಅಧ್ಯಕ್ಷರಾದ ಪದ್ಮರಾಜ್ ಲೋಹಿತ್ ನಗರ, ಪ್ರಧಾನ ಕಾರ್ಯದರ್ಶಿ ರವಿ ಕಾವೂರ್, ಸಂಚಾಲಕ ಶಿವಪ್ರಸಾದ್ ಮುಡಿಪು, ಸದಸ್ಯರಾದ ಧೀರಜ್ ಕಲ್ಲಡ್ಕ ಉಪಸ್ಥಿತರಿದ್ದರು.


