ಜೈಲಿನಲ್ಲಿ ಮುಂಬೈ ಸರಣಿ ಸ್ಫೋಟದ ಆರೋಪಿ ಮೊಹಮ್ಮದ್ ಖಾನ್ ಶಿರಚ್ಛೇದ – ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳಿಂದ ಕೃತ್ಯ.

ಮಂಗಳೂರು(ಮುಂಬೈ): ಮುಂಬೈ ಸರಣಿ ಸ್ಫೋಟದ ಆರೋಪಿ ಮೊಹಮ್ಮದ್​ ಖಾನ್​ ಎಂಬಾತನನ್ನು ಜೈಲಿನಲ್ಲಿ ಸಹ ಕೈದಿಗಳು ಶಿರಚ್ಛೇದ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳು ಭಾನುವಾರ (ಜೂನ್ 2) ಈ ಹತ್ಯೆ ಮಾಡಿದ್ದಾರೆ

1993ರ ಮುಂಬೈ ಬಾಂಬ್‌ ಸ್ಫೋಟ ದ ಆರೋಪಿ ಮೊಹಮ್ಮದ್ ಅಲಿ ಖಾನ್ ನನ್ನು ಕೊಲ್ಲಾಪುರ ಜೈಲಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸರ ಪ್ರಕಾರ, ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳು ಭಾನುವಾರ ಈ ಹತ್ಯೆ ಮಾಡಿದ್ದಾರೆ.  ಆರೋಪಿಗಳು ಮೊಹಮ್ಮದ್ ಅಲಿ ಖಾನ್ ಅವರ ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದಾರೆ. 1993ರ ಮುಂಬೈ ಸ್ಫೋಟದ ನಾಲ್ವರು ಅಪರಾಧಿಗಳನ್ನು ಕೊಲ್ಲಾಪುರ ಜೈಲಿನಲ್ಲಿ ಇರಿಸಲಾಗಿದ್ದು, ಒಬ್ಬ ಅಪರಾಧಿಯ ಹೆಸರು ಮೊಹಮ್ಮದ್ ಅಲಿ ಖಾನ್. ಇನ್ನೊಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳನ್ನು ಮೊಹಮ್ಮದ್ ಅಲಿ ಖಾನ್ ಇದ್ದ ಬ್ಯಾರಕ್‌ನಲ್ಲಿ ಇರಿಸಲಾಗಿತ್ತು. ಪ್ರತೀಕ್ ಪಾಟೀಲ್, ದೀಪಕ್ ಖೋಟ್, ಸಂದೀಪ್ ಚವ್ಹಾಣ್, ರಿತುರಾಜ್ ಇನಾಮದಾರ್ ಮತ್ತು ಸೌರಭ್ ಸಿದ್ಧ ಹತ್ಯೆ ಮಾಡಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲು ಇಲಾಖೆಯ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಸ್ವಾತಿ ಸಾಠೆ ಪ್ರಕಾರ, ಮೃತ ಮೊಹಮ್ಮದ್ ಅಲಿ ಖಾನ್ ಸೇರಿದಂತೆ ಈ ಎಲ್ಲಾ ಆರೋಪಿಗಳು ಒಂದೇ ಬ್ಯಾರಕ್‌ನಲ್ಲಿ ಇದ್ದರು. ಇದರಿಂದಾಗಿ ಅವರ ನಡುವೆ ಏನಾದರೂ ಜಗಳವಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಕೊಲ್ಲಾಪುರ ಜೈಲಿನಲ್ಲಿರುವ ಮುಂಬೈ ಸ್ಫೋಟದ ಇತರ ಆರೋಪಿಗಳ ಭದ್ರತೆಯನ್ನು ಜೈಲು ಇಲಾಖೆ ಹೆಚ್ಚಿಸಿದೆ. ಜೈಲಿನೊಳಗೆ ನಡೆದ ಈ ಹತ್ಯೆಗೆ ಪ್ರಮುಖ ಕಾರಣ ಏನು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೊಹಮ್ಮದ್ ಅಲಿ ಖಾನ್ ಅಲಿಯಾಸ್ ಮುನ್ನಾ ಅಲಿಯಾಸ್ ಮನೋಜ್ ಕುಮಾರ್ ಭನ್ವರ್‌ಲಾಲ್ ಗುಪ್ತಾ ಕೋಲ್ಹಾಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಐವರು ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 12, 1993 ರಂದು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ 28 ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ 50 ಜನರು ಸಾವನ್ನಪ್ಪಿದರು. ಅರ್ಧ ಗಂಟೆಯ ನಂತರ, ಕಾರಿನಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು ಮತ್ತು ನಂತರ ಒಂದರ ನಂತರ ಒಂದರಂತೆ ಸರಣಿ ಸ್ಫೋಟಗಳು ಸಂಭವಿಸಿದ್ದವು. ಎರಡು ಗಂಟೆಗಳಲ್ಲಿ ಮುಂಬೈನ 12 ಸ್ಥಳಗಳಲ್ಲಿ 13 ಸ್ಫೋಟಗಳು ಸಂಭವಿಸಿತ್ತು. ಈ ಸರಣಿ ಸ್ಫೋಟಗಳಲ್ಲಿ 257 ಜನರು ಸಾವನ್ನಪ್ಪಿದ್ದರು ಮತ್ತು 713 ಜನರು ಗಾಯಗೊಂಡಿದ್ದರು.

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!