ಕೇರಳ ರಾಜ್ಯತುಳು ಅಕಾಡಮಿ ಸದಸ್ಯ ಪಟ್ಟೋರಿ ಗಣೇಶ್ ಕಾಜವರು ವಿಧಿವಶ.

ಕೇರಳ ರಾಜ್ಯತುಳು ಅಕಾಡಮಿ ಸದಸ್ಯ ಪಟ್ಟೋರಿ ಗಣೇಶ್ ಕಾಜವರು ವಿಧಿವಶ
ದಿವಂಗತ ಶ್ರೀ ಗಣೇಶ್ ಕಾಜವ ಪಟ್ಟೋರಿ ಯವರು ತಲಪಾಡಿ ನಾರ್ಲ ಪಡೀಲ್ ಕೇರಳ ಗಡಿ ಪ್ರದೇಶ ನಿವಾಸಿಯಾಗಿರುತ್ತಾರೆ. ಇವರು 17-ಏಪ್ರಿಲ್-1959 ರಂದು ಪಟ್ಟೋರಿ, ಕೊಣಾಜೆ ಯಲ್ಲಿ ಬಂಟರ ಸಮುದಾಯದಲ್ಲಿ ಜನಿಸಿದರು. ಇವರು ದಿವಂಗತ ಭೋಜ ಕಾಜವ ಪಟ್ಟೋರಿ ಮತ್ತು ದಿವಂಗತ ಗುಲಾಬಿ ಕಾಜವ ದಂಪತಿಗಳ ಮಗ.
ಅವರು ತಮ್ಮ ಕಾಲೇಜು ಶಿಕ್ಷಣವನ್ನು ಶ್ರೀ ಮಹಾವೀರ ಕಾಲೇಜು, ಮೂಡಬಿದ್ರಿಯಲ್ಲಿ ಪೂರ್ಣಗೊಳಿಸಿದ್ದಾರೆ. ದಿವಂಗತ ಕಾಜವರು
ಕೇರಳ ರಾಜ್ಯ ತುಳು ಅಕಾಡಮಿಯ ಸದಸ್ಯರೂ ಕೂಡ ಆಗಿರುವರು

1980-81ರಲ್ಲಿ ದಾವಣಗೆರೆಯಲ್ಲಿ ಜರಗಿದ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ವಿದ್ಯಾರ್ಥಿಗಳ ದೇಹದಾರ್ಢ್ಯ ಸ್ಪರ್ಧಾಕೂಟದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.

ಶ್ರೀ ಗಣೇಶ್ ಕಾಜವರವರು ಸಾಮಾಜಿಕ, ಧಾರ್ಮಿಕ, ರಂಗಗಳಲ್ಲದೆ, ರಾಜಕೀಯವಾಗಿ ಜನತಾಪಕ್ಷ ಮತ್ತು ಜನತಾದಳ (ಜಾ) ಪಕ್ಷದಲ್ಲಿ ಗುರುತಿಸಿಕೊಂಡು, ಕೊಣಾಜೆ ಮಂಡಲ ಪಂಚಾಯತ್ನ ಸದಸ್ಯರಾಗಿ, ತಲಪಾಡಿ ಶ್ರೀ ದುರ್ಗಾ ಸೇವಾ ಸಮಿತಿಯ ಸದಸ್ಯರಾಗಿ ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆ ಮಾಡಿರುತ್ತಾರೆ.

ಇವರು ರಿಯಲ್ ಎಸ್ಟೇಟ್ ವ್ಯವಹಾರ, ಕೃಷಿ, ಭೂಮಿ ಅಭಿವೃದ್ಧಿ, ಹಾಗು ಇತರ ವ್ಯಾಪಾರ ವಹಿವಾಟುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.
ವರದಿ: ಯಶು ಪಕ್ಕಳ ತಲಪಾಡಿ

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?