ಸುಧೀರ್ಘ ಕಾಲದ ಅಧ್ಯಾಪನ ವೃತ್ತಿಯಿಂದ ಸೇವೆಗೆ ನಿವೃತ್ತಿಯಾದ ಕನಕಂ ಟೀಚರ್ ಮತ್ತು ನಾಗರಾಜ ಸರ್.

ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಕಡಂಬಾರು ಇಲ್ಲಿನ ಸಮಾಜ ವಿಜ್ಞಾನ ಅಧ್ಯಾಪಿಕೆಯಾದ ಕನಕಂ ಟೀಚರ್ ಸುಮಾರು 26 ವರ್ಷಗಳ ಅಧ್ಯಾಪನ ವೃತ್ತಿಯಿಂದ ಔದ್ಯೋಗಿಕವಾಗಿ ನಿವೃತ್ತರಾದರು. ಅದೇ ರೀತಿ ಇದೇ ಶಾಲೆಯಲ್ಲಿ ಸುಮಾರು 30 ವರ್ಷಗಳ ಸೇವೆಯನ್ನು ಮಾಡಿದ ನಾಗರಾಜ ಸರ್ ಅವರು ಕೂಡ ಔದ್ಯೋಗಿಕ ಜೀವನದಿಂದ ನಿವೃತ್ತರಾದರು.ಶಾಲೆಯಲ್ಲಿ ನಡೆಸಿದ ವಿದಾಯ ಕೂಟದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನಿತಾ ಕೆ.ಬಿ ,ಹಾಗೂ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಫಾರೂಕ್, ಎಸ್ಎಂಸಿ ಚಾರ್ಮೇನ್ ಶ್ರೀ ಮೊಯ್ದೀನ್ ಹಾಗೂ ಎಸ್ ಎಂ ಡಿ ಸಿ ಕನ್ಟಿನರ್ ಮುಸ್ತಫಾ ಕಡಂಬಾರ್ ಮತ್ತು ಶಾಲಾ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಇವರಿಗೆ ಫಲ, ಪುಟ್ಟಿಗಳನ್ನು ನೀಡಿಗೌರವ ಸಲ್ಲಿಸಲಾಯಿತು.

News Editor

Learn More →

Leave a Reply

Your email address will not be published. Required fields are marked *